ಔರಂಗಾಬಾದ್
ರಾಜ್ಯದಲ್ಲಿ ಕಳೆದ ಸೆಪ್ಟೆಂಬರ್ ತಿಂಗಳಿಂದ 11 ಜನರು ಮಾರಣಾಂತಿಕ ಡೆಂಘಿ ರೋಗಕ್ಕೆ ಬಲಿಯಾಗಿದ್ದಾರೆ.ಅಲ್ಲಿನ ಆರೋಗ್ಯ ಇಲಾಖೆ ಮೂಲಗಳ ಪ್ರಕಾರ, ಸೆಪ್ಟೆಂಬರ್ 15ರಿಂದ ಅಕ್ಟೋಬರ್ 12ರವರೆಗೆ ಸರ್ಕಾರಿ ಆಸ್ಪತ್ರೆಗಳು ಸೇರಿ ವಿವಿಧೆಡೆ 11 ಜನರು ಡೆಂಘಿ ರೋಗಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇವುಗಳಲ್ಲಿ ಸೆಪ್ಟೆಂಬರ್ ನಲ್ಲಿ ಆರು, ಅಕ್ಟೋಬರ್ ನಲ್ಲಿ ಮೂರು ಮತ್ತು ನವೆಂಬರ್ ನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ 270 ರೋಗಿಗಳು ಡೆಂಘಿ ಸೋಂಕಿಗೆ ಗುರಿಯಾಗಿರುವುದು ಪತ್ತೆಯಾಗಿದೆ. ಔರಂಗಾಬಾದ್ ಸ್ಥಳೀಯ ಸಂಸ್ಥೆ ಈಗಾಗಲೇ ಡೆಂಘಿ ರೋಗಿಗಳಿಗಾಗಿ ವಿಶೇಷ ಹೊರರೋಗಿ ವಿಭಾಗವನ್ನು ಆರಂಭಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ