ಜೈಪುರ :
ಲೋಕಸಭಾ ಮಹಾ ಸಮರ ಹತ್ತಿರವಿರುವ ಬೆನ್ನಲ್ಲೇ ರಾಜಸ್ಥಾನ ಬಿಜೆಪಿಗೆ ಮುಖಂಡರು ಪಕ್ಷದಲ್ಲಿ ಮೇಜರ್ ಸರ್ಜರಿ ಮಾಡಿದ್ದಾರೆ.
ಇತ್ತೀಚೆಗಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯದ 15 ಜಿಲ್ಲಾಧ್ಯಕ್ಷರನ್ನು ಬದಲಾಯಿಸಿ ಆದೇಶ ನೀಡಿದೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.
ಇಬ್ಬರು ಶಾಸಕರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನವನ್ನು ನೀಡಲಾಗಿದೆ. 41 ಜಿಲ್ಲೆಗಳ ಪೈಕಿ ಒಟ್ಟು 15 ಜಿಲ್ಲೆಗಳ ಅಧ್ಯಕ್ಷರು ಬದಲಾಗಿದ್ದಾರೆ ಎಂದು ಬಿಜೆಪಿ ಅಧಿಕೃತ ಮೂಲಗಳು ತಿಳಿಸಿವೆ.
ಬದಲಾವಣೆ ವೇಳೆ ಹಲವು ರೀತಿಯ ಮಾನದಂಡಗಳನ್ನು ಅನುಸರಿಸಲಾಗಿದ್ದು, ಜಾತಿಯನ್ನು ಪ್ರಮುಖವಾಗಿ ಪರಿಗಣಿಸಲಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲುವು ಪಡೆಯುವುದನ್ನೇ ಪ್ರಮುಖ ಗುರಿಯಾಗಿಸಿಕೊಂಡು ಬದಲಾವಣೆ ಮಾಡಲಾಗಿದೆ.
ಜೈಪುರ ನಗರದ ಅಧ್ಯಕ್ಷ ಸ್ಥಾನ ನೀಡುವ ವೇಳೆ ವೈಶ್ಯ ಸಮುದಾಯಕ್ಕೆ ಪ್ರಾಧಾನ್ಯತೆ ನೀಡಲಾಗಿದೆ. ಮಾಜಿ ಶಾಸಕ ಗುಪ್ತಾ ಅವರನ್ನು ಕೆಳಕ್ಕೆ ಇಳಿಸಿ ಸಂಜಯ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
