ಅಮೇಥಿಯಲ್ಲಿ ರಾಹುಲ್ 2 ದಿನದ ಪ್ರವಾಸ

ಅಮೇಥಿ:

       ಕಾಂಗ್ರೆಸ್ ನ ಯುವರಾಜ ಎಂದೇ ಕರೆಯಲಾಗುವ ಶ್ರೀ ರಾಹುಲ್ ಗಾಂಧಿ ಅವರಿಗೆ ತಮ್ಮ ಲೋಕಸಭಾ ಕ್ಷೇತ್ರ ಅಮೇಥಿ ಈಗ ನೆನಪಿಗೆ ಬಂದಂತಿದೆ ಕ್ಷೇತ್ರಕ್ಕೆ ಭೇಟಿ ನೀಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಶಿವನ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

       ರಾಹುಲ್ ಗಾಂಧಿಗೆ ಕನ್ವಾರಿಯಾ ಸಾಧುಗಳು ಸ್ವಾಗತ ಕೋರಿದರು. ಈ ವೇಳೆ ಸ್ಥಳದಲ್ಲಿ ನೆರೆದಿದ್ದ ಜನರು ಭಮ್ ಭಮ್ ಭೋಲೇ ಎಂದು ಕೂಗಿದರು. ಶಿವ ದೇವಸ್ಥಾನದಲ್ಲಿ ರಾಹುಲ್ ಗಾಂಧಿ ಪ್ರಾರ್ಥನೆ ಮಾಡಿದ ಬಳಿಕ ಅವರನ್ನು ಕನ್ವಾರಿಯಾ ಸಾಧುಗಳು ಸನ್ಮಾನಿಸಿದರು.

       ತಮ್ಮ ಲೋಕಸಭಾ  ಕ್ಷೇತ್ರಕ್ಕೆ ಎರಡು ದಿನಗಳ ಭೇಟಿಗೆಂದು ತೆರಳಿರುವ ರಾಹುಲ್ ಗಾಂಧಿ ಅವರು ಶಿವನ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದುದು ವಿಶೇಷವಾಗಿದ್ದು, ಇನ್ನು ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದರ ಪ್ರಚಾರಕ್ಕೆ ತೆರಳಿದ್ದ ರಾಹುಲ್ ತಾವು ರೋಡ್ ಶೋ ನಡೆಸುವ ಮಾರ್ಗದುದ್ದಕ್ಕೂ ಅವರು ಶಿವ ಲಿಂಗಕ್ಕೆ ನೀರು ಹಾಕುತ್ತಿರುವ ಫ್ಲೆಕ್ಸ್ ಗಳು ಎಲ್ಲೆಡೆ ರಾರಾಜಿಸುತ್ತಿದ್ದವು.

                     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link