ನವದೆಹಲಿ:
ರಾಜ್ಯಸಭಾ ಸಚಿವಾಲಯದ ಒಬ್ಬ ಅಧಿಕಾರಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಸಂಸತ್ತಿನ 2 ಮಹಡಿಗಳನ್ನು ಸೀಲ್ ಮಾಡಲಾಗಿದೆ.ನಿನ್ನೆ ಕರ್ತವ್ಯಕ್ಕೆ ಹಾಜರಾಗಿದ್ದ ನಿರ್ದೇಶಕ ಮಟ್ಟದ ಅಧಿಕಾರಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ಸಂಸತ್ತಿನ ಇತರ ಸಿಬ್ಬಂದಿಗಳಲ್ಲಿ ಆತಂಕ ಉಂಟುಮಾಡಿದೆ. ಅವರ ಕುಟುಂಬಸ್ಥರಿಗೂ ಸೋಂಕು ತಗಲಿದೆ.ಸಂಸತ್ತಿನ ಸಿಬ್ಬಂದಿಗೆ ಕೊರೋನಾ ವಕ್ಕರಿಸಿದ ನಾಲ್ಕನೇ ಪ್ರಕರಣ ಇದಾಗಿದ್ದರೆ ಅಧಿಕಾರಿ ಮಟ್ಟದಲ್ಲಿ ಸಂಸತ್ತಿನ ಸಿಬ್ಬಂದಿಗೆ ಕೊರೋನಾ ಸೋಂಕು ತಗಲಿರುವ ಎರಡನೇ ಪ್ರಕರಣ ಇದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ