ಬರ್ಖಾದತ್ ಕಿರುಕುಳ ಪ್ರಕರಣ : ನಾಲ್ವರ ಬಂಧನ …!!!!

ನವದೆಹಲಿ:
         ದೇಶದ ಪ್ರಮುಖ ಪತ್ರಕರ್ತರಲ್ಲೊಬ್ಬರಾದ  ಶ್ರೀಮತಿ ಬರ್ಖಾ ದತ್ ಅವರಿಗೆ ಸಂಬಂದಿಸಿದಂತೆ ಕೇಸ್ ಒಂದರಲ್ಲಿ 4 ಜನರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ .
      ಸಾಮಾಜಿಕ ತಾಣಗಳ ಮುಖೇನ ಪತ್ರಕರ್ತೆ ಬರ್ಖಾ ದತ್ ಅವರಿಗೆ ಅಶ್ಲೀಲ ಸಂದೇಶಗಳನ್ನು ರವಾನಿಸಿದ್ದ ನಾಲ್ವರನ್ನು ದೆಹಲಿಯ ಸೈಬರ್ ಕ್ರೈಂ ಪೋಲೀಸರು ಬಂಧಿಸಿದ್ದಾರೆ.
      ಅನಾಮಧೇಯ ಜನರ ಬೆದರಿಕೆ ಕರೆಗಳು ಮತ್ತು ಅಶ್ಲೀಲ ಸಂದೇಶಗಳನ್ನು ಸ್ವೀಕರಿಸಿದ ಬಳಿಕ ಬರ್ಖಾ ದತ್ ಫೆಬ್ರವರಿ 21ರಂದು ದೆಹಲಿ ಸೈಬರ್ ಕ್ರೈಂ ಪೋಲೀಸರಲ್ಲಿ ಎಫ್ಐಆರ್ ದಾಖಲಿಸಿದ್ದರು.
      ಬರ್ಖಾದತ್ ಸ್ವತಃ ಆಪಾದಿತರ ಬಂಧನವಾಗಿರುವುದನ್ನು ಖಚಿತಪಡಿಸಿದ್ದು.ದೆಹಲಿಯಿಂದ ರಾಜೀವ್ ಶರ್ಮಾ (23), ಹೇಮರಾಜ್ ಕುಮಾರ್ (31) ದಿತ್ಯ ಕುಮಾರ್ (34) ಮತ್ತು ಶಬ್ಬೀರ್ ರ್ಫಾನ್ ಪಿಂಜರಿ (45) ಅವರುಗಳನ್ನು ಪೋಲೀಸರು ಬಂಧಿಸಿದ್ದಾರೆ. ಇದರಲ್ಲಿ ಮೊದಲ ಮೂವರು ಆರೋಪಿಗಳು ದೆಹಲಿಯವರಾದರೆ ಕಡೆಯ ಆರೋಪಿ ಶಬ್ಬೀರ್ ಮಾತ್ರ್ ಸೂರತ್  ಮೂಲದವನಾಗಿದ್ದನೆಂದು ಪೋಲೀಸರು ಮಾಹಿತಿ ನೀಡಿದ್ದಾರೆ.
       ಇವರುಗಳ ವಿರುದ್ಧ ಐಪಿಸಿ ಸೆಕ್ಷನ್ 354-ಡಿ (ಹಿಂಬಾಲಿಸುವುದು), 506 (ಬೆದರಿಕೆ), 507 (ಕ್ರಿಮಿನಲ್ ಬೆದರಿಕೆ) ಮತ್ತು 120-ಬಿ (ಕ್ರಿಮಿನಲ್ ಪಿತೂರಿ) ಮತ್ತು ಸೈಬರ್ ಕ್ರೈಂ ಕಾಯ್ದೆಯ ಸೆಕ್ಷನ್ ಗಳಾದ 67 ಮತ್ತು 67-ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap