ಬೆಂಗಳೂರು:
ನಾನು ಮುಖ್ಯಮಂತ್ರಿಯಾದ ಅವಧಿಯಲ್ಲೇ ಕನ್ನಡ ಚಿತ್ರರಂಗದ ದಿಗ್ಗಜರಾದ ರಾಜ್‍ಕುಮಾರ್ ಮತ್ತು ಅಂಬರೀಶ್ ಅವರಂಥ ಮೇರು ನಟರು ಇಲ್ಲವಾಗಿದ್ದು, ನನ್ನ ಅದೃಷ್ಟವೋ ದುರಾದೃಷ್ಟವೋ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರು ವಿಷಾಧ ವ್ಯಕ್ತಪಡಿಸಿದ್ದಾರೆ.
ನಗರದ ಅಂಬೇಡ್ಕರ್ ಭವನದಲ್ಲಿಂದು ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಚಲನಚಿತ್ರರಂಗ ಆಯೋಜಿಸಿದ್ದ ಅಂಬಿಗೆ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹಿಂದೆ ನಾನು ಸಿಎಂ ಆಗಿದ್ದಾಗ ಡಾ.ರಾಜ್‍ಕುಮಾರ್ ಅಗಲಿದರು, ಎರಡನೇ ಬಾರಿಗೆ ಮೈತ್ರಿ ಸರ್ಕಾರದ ನೇತೃತ್ವ ವಹಿಸಿದ್ದೇನೆ ಈಗ ರೆಬೆಲ್ ಸ್ಟಾರ್ ಸಾವಿನ ಸುದ್ದಿ ನನಗೆ ಅಘಾತ ತಂದಿದೆ. ಅದರ ಬೆನ್ನಲ್ಲೇ ಕೆಲವು ಗೊಂದಲಗಳು ಉಂಟಾಗಿ ನನ್ನ ಜೀವನದಲ್ಲಿ ನೋವುಂಟು ಮಾಡಿದೆ ಎಂದು ಅವರು ತಿಳಿಸಿದ್ದಾರೆ.
ಬಡವರ ಬಗ್ಗೆ ತಾಯಿ ಹೃದಯ ಹೇಗೆ ಇರಬೇಕು ಎಂಬ ಬಗ್ಗೆ ನನಗೆ ತಂದೆ-ತಾಯಿಗಳಿಂದ ಕಲಿತಿದ್ದೇನೆ. ನಂತರ ಡಾ.ರಾಜ್ ಚಿತ್ರಗಳೇ ನನಗೆ ಪ್ರೇರಣೆ, ಅಂಬರೀಶ್ ನಮಗೆ ಅಣ್ಣನಂತೆ ಇದ್ದರು. ಸ್ನೇಹ ಎಂದರೆ ಅಂಬಿ ಅವರಿಂದಲೇ ನನಗೆ ತಿಳಿಯಿತು. ಅವರ ಅಂತಿಮ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿದ್ದು, ಇದಕ್ಕೆ ಕಾರಣ ಅಂಬಿ ಒಳ್ಳೆಯ ಗುಣ ಕಾರಣ. ಅದ್ದರಿಂದಲೇ ಎಲ್ಲವೂ ಸುಸೂತ್ರವಾಗಿ ನಡೆಯಿತು ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ