40 ಬಿಜೆಪಿ ನಾಯಕರ ಉಚ್ಚಾಟನೆ

ಡೆಹ್ರಾಡೂನ್:

    ಹಠಾತ್ ರಾಜಕೀಯ ಬೆಳವಣಿಗೆಯಲ್ಲಿ  ಬಿಜೆಪಿಯ  40 ನಾಯಕರನ್ನು ಪಕ್ಷ ವಿರೋಧಿ ಚಟುವಟಿಕೆ ಆಧಾರದ ಮೇಲೆ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ. 

  ಉತ್ತರಾಖಂಡ್ ನ ಬಿಜೆಪಿ ಪಕ್ಷದ ಸುಮಾರು 40 ಮಂದಿಯನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ. ರಜನೀಶ್ ಶರ್ಮಾ, ಮೀರಾ ರತುರಿ, ಮೋಹನ್ ಸಿಂಗ್ ಬಿಶ್ತ್, ಮಹೇಶ್ ಬಾಗ್ರಿ, ಪ್ರಮೀಲಾ ಯುನಿಯಲ್, ಭವನ್ ಸಿಂಗ್ ಉಚ್ಚಾಟನೆಗೊಂಡಿರುವ ಪ್ರಮುಖ ಸದಸ್ಯರಾಗಿದ್ದಾರೆ. 

   ಜುಲೈ ತಿಂಗಳಲ್ಲಿ ಉತ್ತರಾಖಂಡ್ ನ ಶಾಸಕ ಕುನ್ವರ್ ಪ್ರಣವ್ ಸಿಂಗ್ ನ್ನು ರಿವಾಲ್ವರ್‌ ಹಿಡಿದು ನೃತ್ಯ ಮಾಡಿದ್ದಕ್ಕಾಗಿ ಉಚ್ಚಾಟನೆಗೊಳಿಸಿತ್ತು. ಈಗ ಪ್ರಧಾನಿ ನರೇಂದ್ರ ಮೋದಿ ಪಕ್ಷದ ಜನಪ್ರತಿನಿಧಿಗಳೊಂದಿಗೆ ನಡೆಸಿದ್ದ ಮಹತ್ವದ ಸಭೆಯ ಒಂದು ತಿಂಗಳ ಬೆನ್ನಲ್ಲೇ ಈ ಬೆಳವಣಿಗೆ ನಡೆದಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap