ಶಿಮ್ಲಾ
ಹಿಮಾಚಲ ಪ್ರದೇಶದ ಸುತ್ತಮತ್ತಲಿನ ಕಣಿವೆಗಳಲ್ಲಿ ನೂರಾರು ರುದ್ರರಮಣಿಯ ದೃಶ್ಯಗಳು ಸಹಜವಾಗಿಯೇ ಕಾಣಿಸುತ್ತವೆ ಆದರೆ ಅಲ್ಲಿ ಆಗುವ ಅಪಘಾತಗಳು ಹಾಗೆಯೇ ಅತಿ ಭಯಾನಕವಾಗಿರುತ್ತವೆ ಇಂದು ಸಹ ಅದೇ ಕಣಿವೆಗಳಲ್ಲಿ ಶಾಲಾ ಮಕ್ಕಳನ್ನು ಹೊತ್ತ ಬಸ್ಸೊಂದು ಕಣಿವೆಗೆ ಉರುಳಿದ ಪರಿಣಾಮ ಆರು ಮಕ್ಕಳು ಮತ್ತು ಬಸ್ಸಿನ ಚಾಲಕ ಮೃತರಾಗಿದ್ದಾರೆ.
ಇಂದು ಬೆಳಿಗ್ಗೆ ಹಿಮಾಚಲ ಪ್ರದೇಶದ ಶಿಮ್ಲಾ ಬಳಿ ನಡೆದಿದೆ.ಶಿಮ್ಲಾ ಬಳಿಯ ಸಿರ್ಮೌರ್ ಜಿಲ್ಲೆಯಲ್ಲಿ ಡಿಎವಿ ಪಬ್ಲಿಕ್ ಶಾಲೆಗೆ ಮಕ್ಕಳು ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡ 12 ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
