ಚೆನ್ನೈ:
ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ದೊಡ್ಡ ಪವಾಡವೊಂದು ನಡೆಯಲಿದೆ ಮತ್ತು ತಮಿಳು ಜನತೆ ಅಂತಹ ಅದ್ಭುತಕ್ಕೆ ಕಾರಣೀಭೂತರಾಗಲಿದ್ದಾರೆ ಎಂದು ರಜನಿಕಾಂತ್ ಹೇಳಿದ್ದಾರೆ.
ತಮಿಳುನಾಡಿನಲ್ಲಿ ಜಾತಿ/ಸಮುದಾಯ ರಾಜಕೀಯಕ್ಕೆ ಅವಕಾಶ ಇಲ್ಲ ಎಂಬ ಮೀನುಗಾರಿಕೆ ಸಚಿವ ಡಿ ಜಯಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರಜನಿಕಾಂತ್, 2021ರಲ್ಲಿ ತಮಿಳುನಾಡಿನ ಜನ ಒಂದು ದೊಡ್ಡ ಪವಾಡ ಸೃಷ್ಟಿಸಲಿದ್ದಾರೆ. ಇದು ಶೇ.100ರಷ್ಟು ಖಚಿತ ಎಂದು ಹೇಳುವ ಮೂಲಕ ಭಿಮಾನಿಗಳಿಗೆ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಸೂಚನೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








