ನವದೆಹಲಿ :
ದ್ರವ ರೂಪದ ಚಿನ್ನ ಎಂದೇ ಕರೆಯಲಾಗುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಈ ತಿಂಗಳಲ್ಲಿ ಇದುವರೆಗೆ ಅತಿದೊಡ್ಡ ಕುಸಿತವನ್ನು ದಾಖಲಿಸಿದೆ.ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಬೆಲೆಯನ್ನು 21 ರಿಂದ 22 ಪೈಸೆ ಮತ್ತು ಡೀಸೆಲ್ ಬೆಲೆಯನ್ನು ಲೀಟರ್ಗೆ 24 ರಿಂದ 26 ಪೈಸೆ ಕಡಿಮೆ ಮಾಡಿವೆ.
ಈ ಭಾರಿ ಕುಸಿತಕ್ಕೆ ಕಾರಣ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ತೀವ್ರವಾಗಿ ಕುಸಿದ ಕಾರಣ, ದೇಶದ ಗ್ರಾಹಕರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ನಿರಂತರವಾಗಿ ಕುಸಿತವನ್ನ ಕಂಡಿದ್ದಾರೆ. ಈ ತಿಂಗಳು ಇಲ್ಲಿಯವರೆಗೆ ಪೆಟ್ರೋಲ್ ಪ್ರತಿ ಲೀಟರ್ಗೆ 59 ಪೈಸೆ ಇಳಿಕೆಯಾಗಿದೆ, ಡೀಸೆಲ್ ಬೆಲೆಯಲ್ಲಿ ಗ್ರಾಹಕರಿಗೆ ಪ್ರತಿ ಲೀಟರ್ 60 ಪೈಸೆ ಇಳಿಕೆಯಾಗಿದೆ ಎನ್ನಲಾಗಿದೆ.
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಯಾದ ಇಂಡಿಯನ್ ಆಯಿಲ್ ನೀಡಿರುವ ಮಾಹಿತಿ ಪ್ರಕಾರ ದೆಹಲಿ, ಕೋಲ್ಕತಾ, ಮುಂಬೈ ಮತ್ತು ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ಕ್ರಮವಾಗಿ 72.68, 75.36, 78.34 ಮತ್ತು 75.51 ರೂ ಆದ್ರೆ, ಡೀಸೆಲ್ ಬೆಲೆ ಕ್ರಮವಾಗಿ 65.68, 68.04, 68.84 ಮತ್ತು 69.73 ರೂಗಳಿಗೆ ಇಳಿದಿದೆ ಎಂದು ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ