ನವದೆಹಲಿ
ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷ ತೊರೆದಿದ್ದ ದೆಹಲಿಯ ಚಾಂದಿನಿ ಚೌಕ್ ಶಾಸಕಿ ಅಲ್ಕಾ ಲಂಬಾ ಅವರು ನಿರೀಕ್ಷೆಯಂತೆ ತಾವು ಮುಂಚೆ ಇದ್ದ ಕಾಂಗ್ರೆಸ್ ಪಕ್ಷವನ್ನೇ ಸೇರಿದ್ದಾರೆ.
ಶಾಸಕರ ಅನರ್ಹತೆಗೆ ಸಂಬಂಧಿಸಿದ ಸಂವಿಧಾನದ 10ನೇ ಪರಿಚ್ಛೇದದ ಕಲಂ 2(1)ರ ಅನ್ವಯ ಅಲ್ಕಾ ಲಂಬಾ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಆದೇಶ ಹೊರಡಿಸಲಾಗಿತ್ತು. ಎಎಪಿ ಪಕ್ಷದಿಂದ ಹೊರ ಬಂದ ಬಳಿಕ ಕಪಿಲ್ ಮಿಶ್ರಾ, ಸಂದೀಪ್ ಕುಮಾರ್, ಅನಿಲ್ ಬಾಜ್ಪೇಯಿ, ದೇವೇಂದ್ರ ಶೇಹ್ರಾವತ್ ಅವರನ್ನು ಕೂಡಾ ಪಕ್ಷಾಂತರ ನಿಷೇಧ ಕಾಯ್ದೆಯಡಿಯಲ್ಲಿ ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದ್ದು ಅವರ ನಡೆ ಇನ್ನು ಗೌಪ್ಯವಾಗಿದೆ ಎನ್ನಲಾಗಿದೆ.
ನಾನು ಅಚಾತುರ್ಯದಿಂದ ತೆಗೆದುಕೊಂಡ ನಿರ್ಧಾರವನ್ನು ಮನ್ನಿಸಿ ನನ್ನನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡಿದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ . ನನ್ನ ಮುಂದಿನ ರಾಜಕೀಯ ಭವಿಷ್ಯವನ್ನು ಮತ್ತೊಮ್ಮೆ ಕಾಂಗ್ರೆಸ್ ನಿಂದ ರೂಪಿಸಿಕೊಳ್ಳಲು ಉತ್ಸುಕಳಾಗಿದ್ದೇನೆ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ