ಬಾಗಿಲು ಮುಚ್ಚಿದ ಅಟ್ಲಾಸ್ : ಅತಂತ್ರವಾದ ಕಾರ್ಮಿಕರ ಬದುಕು

ಲಖನೌ

      ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿರುವ ನೊಬೆಲ್ ವಸ್ತುಸಂಗ್ರಹಾಲಯದ ಗೋಡೆಗಳನ್ನು ಅಲಂಕರಿಸುವ ನೂರಾರು ಕಲಾಕೃತಿಗಳಲ್ಲಿ ಕಪ್ಪು ಬಣ್ಣದ ಬೈಸಿಕಲ್ ಸಹ ಒಂದು. “ಅದು ಸಾಮಾನ್ಯ ಬೈಸಿಕಲ್ ಅಲ್ಲ” ಎಂದು ಮ್ಯೂಸಿಯಂನ ಕ್ಯುರೇಟರ್ ಕಳೆದ ವರ್ಷ ಡಿಸೆಂಬರ್ ನಲ್ಲಿ ಭಾರತೀಯ ಮೂಲದ ಪತ್ರಕರ್ತರಿಗೆ ತಿಳಿಸಿದ್ದರು. 2019 ರ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಪ್ರಧಾನ ಸಮಾರಂಬದ ವೇಳೆ ಈ ಪತ್ರಕರ್ತರಿಗೆ ಆ ಸೈಕಲ್ ಬಗ್ಗೆ ಹೇಳಲಾಗಿತ್ತು. ಏಕೆಂದರೆ ಅಟ್ಲಾಸ್ ತಯಾರಿಸಿದ ಬೈಸಿಕಲ್ ಭಾರತದ ಇನ್ನೊಬ್ಬ ಹೆಮ್ಮೆಯ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಅವರಿಗೆ ಸೇರಿತ್ತು.

     1998 ರ ನೊಬೆಲ್ ವಿಜೇತರಾದ  ಸೇನ್ ಪಶ್ಚಿಮ ಬಂಗಾಳದಲ್ಲಿ ತಮ್ಮ ಕ್ಷೇತ್ರಕಾರ್ಯದ ಸಮಯದಲ್ಲಿ ಅದರ ಮೇಲೆ ಸವಾರಿ ನಡೆಸಿದ್ದರು. ಇಂತಹಾ ಸೈಕಲ್ ಬ್ರಾಂಡ್‌ನ ತಯಾರಕರು  ಭಾರತದಲ್ಲಿ ಸೈಕ್ಲಿಂಗ್ ಕ್ರಾಂತಿಯ ಪ್ರವರ್ತಕರು ಮತ್ತು ಬಹುತೇಕ ಎಲ್ಲ ಮಕ್ಕಳ ಮೊದಲ ಸೈಕಲ್ ಆಗಿರುತ್ತಿದ್ದ  ಅಟ್ಲಾಸ್ ಸೈಕಲ್ಸ್ ಹರಿಯಾಣ ಲಿಮಿಟೆಡ್ ಈಗ ಶಾಶ್ವತವಾಗಿ ಬಾಗಿಲು ಮುಚ್ಚಿದೆ. 

    ದೆಹಲಿಯಿಂದ 40 ಕಿ.ಮೀ ದೂರದಲ್ಲಿರುವ ಹರಿಯಾಣದ ಸೋನೆಪತ್‌ನಲ್ಲಿರುವ ಸಾಧಾರಣ ಟಿನ್ ಶೆಡ್ ಒಂದರಲ್ಲಿ  1951 ರಲ್ಲಿ ಪ್ರಾರಂಭವಾದ ಈ ಕಂಪನಿ ಇದೀಗ ಇತಿಹಾಸದ ಪುಟ ಸೇರಿದೆ.ಕಂಪನಿಯು ತನ್ನ ಕೊನೆಯ ಕೈಗಾರಿಕಾ ಪ್ರದೇಶವನ್ನು ನವದೆಹಲಿಯ ಹೊರವಲದಲ್ಲಿದ್ದ ಸಾಹಿಬಾಬಾದ್‌ನಲ್ಲಿ ಜೂನ್ 3ರಂದು ಬಂದ್ ಮಾಡುವ ಮೂಲಕ ಅಟ್ಲಾಸ್ ಕಂಪನಿ ಶಾಶ್ವತವಾಗಿ ಮುಚ್ಚಿದಂತಾಗಿದೆ.ನಮ್ಮ ದಿನನಿತ್ಯದ ಕಾರ್ಯಾಚರಣೆಗಳಿಗೆ ಹಣವನ್ನು ಹೊಂದಿಸುವಲ್ಲಿ  ನಾವು ತೊಂದರೆ ಎದುರಿಸುತ್ತಿದ್ದೇವೆ. ಕಚ್ಚಾ ವಸ್ತುಗಳನ್ನು ಖರೀದಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಈ ಪರಿಸ್ಥಿತಿಗಳಲ್ಲಿ, ಕಾರ್ಖಾನೆಯನ್ನು ನಿರ್ವಹಿಸುವ ಸ್ಥಿತಿಯಲ್ಲಿ ನಾವಿಲ್ಲ” ಎಂದು ಕಂಪನಿಯ ಗೇಟ್‌ಗಳ ಮೇಲೆ ಅಂಟಿಸಲಾದ ಸೂಚನಾ ಫಲಕ ಹೇಳಿದೆ.

    “ಜೂನ್ 1 ಮತ್ತು 2ಕ್ಕೆ ಲಾಕ್ ಡೌನ್ ನ ಬಳಿಕ ತೆರೆಯಲಿದೆ ಎಂಬ ಸಂತೋಷದೊಡನೆ ನಾವು ಬಂದಿದ್ದೆವು. ಆದರೆ ಕಾರ್ಖಾನೆ ಮುಚ್ಚುತ್ತದೆ ಎಂಬ ಬಗ್ಗೆ ಯಾವುದೇ ಸುಳಿವು ಇರಲಿಲ್ಲ ”ಎಂದು ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಹೇಶ್ ಕುಮಾರ್ ಹೇಳಿದರು.”ಬುಧವಾರ, ನಾವು ಗೇಟ್‌ಗಳಲ್ಲಿ ಒಟ್ಟುಗೂಡುತ್ತಿದ್ದಾಗ ಗೇಟ್‌ನಲ್ಲಿ ನೋಟಿಸ್ ತೋರಿಸಿದ ಕಾವಲುಗಾರರಿಂದ ನಮಗೆ ಪ್ರವೇಶ ನಿರಾಕರಿಸಲಾಯಿತು” ಎಂದು ಕುಮಾರ್ ಹೇಳಿದರು, ಅವರು ಕಾರ್ಖಾನೆಯ ಹಠಾತ್ ಮುಚ್ಚುವಿಕೆಯ ವಿರುದ್ಧ ಕಾರ್ಮಿಕ ನ್ಯಾಯಾಲಯಕ್ಕೆ ತೆರಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap