ಕಾಶ್ಮೀರ:
ಕಾಶ್ಮೀರದ ಅನಂತನಾಗ್ ಜಿಲ್ಲೆಯ ಡಿಸಿ ಕಚೇರಿ ಮೇಲೆ ಭಯೋತ್ಪಾದಕರು ಗ್ರೈನೇಡ್ ದಾಳಿ ನಡೆಸಿದ್ದಾರೆ ಈ ಘಟನೆತಲ್ಲಿ ಸುಮರು 10 ಮಂದಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನಂತ್ ನಾಗ್ ಪಟ್ಟಣದ ಸಂಕೀರ್ಣದ ಹೊರಗಿನ ಭದ್ರತಾ ಪಡೆಯ ಮೇಲೆ ಭಯೋತ್ಪಾದಕರು ಗ್ರೈನೇಡ್ ದಾಳಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಯೋತ್ಪಾದಕರು ಎಸೆದ ಗ್ರೆನೇಡ್ ಗುರಿ ತಪ್ಪಿದ್ದರಿಂದ ರಸ್ತೆಬದಿಯಲ್ಲಿ ಸ್ಫೋಟಗೊಂಡಿದೆ ಈ ಸ್ಫೋಟದಲ್ಲಿ ಎಂಟು ಜನ ಪಾದಾಚಾರಿಗಳು ಒಬ್ಬ ಪೊಲೀಸ್ ಮತ್ತು ಪತ್ರಕರ್ತರೊಬ್ಬರಿಗೆ ಗಾಯಗಳಾಗಿವೆ ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಇನ್ನು ಘಟನಾ ಸ್ಥಳದ ಸುತ್ತ ಭದ್ರತಾ ಪಡೆಗಳು ಸುತ್ತುವರೆದಿದ್ದು ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ