ಮುಂಬೈ:
ಕೆಲದಿನಗಳ ಹಿಂದೆಯಷ್ಟೆ ಅಯೋಧ್ಯೆ ವಿವಾದಕ್ಕೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದ ಅಂತೂ ಹೇಗೋ ತೆರೆ ಬಿದ್ದಿದೆ , ಆದರೆ ಈಗ ರಾಜಕೀಯ ಮುಖಂಡರು ಒಂದಿಲ್ಲೊಂದು ಹೇಳಿಕೆಗಳನ್ನು ನೀಡಿ ತೀರ್ಪಿನ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ಇದೀಗ ಯಶವಂತ ಸಿನ್ಹಾ ಅಯೋಧ್ಯೆ ತೀರ್ಪು ದೋಷಪೂರಿತವಾಗಿದೆ ಎಂದಿದ್ದಾರೆ.
ಸುಪ್ರೀಂ ತೀರ್ಪು ಏಕಪಕ್ಷೀಯ ಮತ್ತು ದೋಷಪೂರಿತವಾಗಿದೆ , ಆದರೂ ಮುಸ್ಲಿಂ ಬಾಂಧವರು ಈ ತೀರ್ಪನ್ನು ಒಪ್ಪಿಕೊಳ್ಳಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದು ಯಶವಂತ ಸಿನ್ಹಾ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ದೇಶದ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದ ಮೇಲೆ ಮತ್ತೊಂದು ತೀರ್ಪು ಇರುವುದಿಲ್ಲ. ಹೀಗಾಗಿ ಎಲ್ಲರೂ ತೀರ್ಪನ್ನು ಒಪ್ಪಿಕೊಂಡು ಮುಂದೆ ನಡೆಯಬೇಕು ಎಂದು ಹೇಳಿದರು.
ಬಿಜೆಪಿ ಕೋಮುವಾದಿ ಶಕ್ತಿ ಎಂದು ತಿಳಿದಿದ್ದರೂ 1993ರಲ್ಲಿ ನಾನು ಭ್ರಷ್ಟ ಶಕ್ತಿ(ಕಾಂಗ್ರೆಸ್)ಗಿಂತ ಇದು ಉತ್ತಮ ಪರ್ಯಾವೆಂದು ಭಾವಿಸಿ ಬಿಜೆಪಿ ಸೇರುವ ನಿರ್ಧಾರವನ್ನು ತೆಗೆದುಕೊಂಡಿದ್ದೆ ಎಂದರು.