ಮುಂಬೈ:
ಲೈಂಗಿಕ ಕ್ರಿಯೆಗೆ ನಿರಾಕರಿಸಿದಕ್ಕೆ ಹೆರಿಗೆ ಮುಗಿಸಿಕೊಂಡು ಮನೆಗೆ ಬಂದಿದ್ದ ಭಾಣಂತಿಯನ್ನು 25 ವರ್ಷದ ಯುವಕ ಕೊಲೆ ಮಾಡಿರುವ ಘಟನೆ ಥಾಣೆಯ ಬಿವಾಂಡಿಯಲ್ಲಿ ವರದಿಯಾಗಿದೆ.
ಕೊಲೆಗಾರನನ್ನು ವಿಕಾಶ್ ಚೌರಾಸಿಯಾ ಎಂದು ಗುರುತಿಸಲಾಗಿದ್ದು. ಮೃತ ಮಹಿಳೆಗೆ ಮದುವೆಯಾಗಿದ್ದು, ಒಂದೂವರೆ ವರ್ಷದ ಮಗು ಹಾಗೂ 25 ದಿನಗಳ ಇನ್ನೊಂದು ಮಗುವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ ಮತ್ತು ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸವಿಯಾಗಿದ್ದಾರೆ.
ಪ್ರಕರಣದ ಹಿನ್ನೆಲೆ :
ಕೊಲ್ಲಲ್ಪಟ್ಟ ಮಹಿಳೆ ಮೂಲತಃ ಉತ್ತರ ಪ್ರದೇಶದರಾಗಿದ್ದು, ಮದುವೆಯ ನಂತರ ಪತಿಯ ಜೊತೆ ಮುಂಬೈನಲ್ಲಿ ವಾಸವಾಗಿದ್ದರು ಈ ಮದ್ಯೆ ಆರೋಪಿ ವಿಕಾಸ್ ಹಾಗೂ ಮಹಿಳೆ ಪತಿ ಕೆಲಸದ ವಿಚಾರದಲ್ಲಿ ಪರಿಚಯವಾಗಿದ್ದರು. ದಿನಕಳೆದಂತೆ ಆರೋಪಿ ವಿಕಾಸ್ ಆಗಾಗ ಮೃತಳ ಮನೆಗೆ ಬರುತ್ತಿದ್ದನು. ಬಳಿಕ ಮೃತ ಮಹಿಳೆ ಮತ್ತು ಆರೋಪಿ ಇಬ್ಬರ ಮಧ್ಯೆ ಅನೈತಿಕ ಸಂಬಂಧ ಬೆಳೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಮೃತ ಮಹಿಳೆಗೆ ಹೆರಿಯಾಗಿತ್ತು ನಂತರ ಮನೆಗೆ ಬಂದಿದ್ದಾರೆ. ಈ ವೇಳೆ ಆರೋಪಿ ಮನೆಗೆ ಬಂದು ಮಹಿಳೆಯನ್ನು ಭೇಟಿಯಾಗಿ ತನ್ನೊಂದಿಗೆ ಸೆಕ್ಸ್ ಮಾಡುವಂತೆ ಒತ್ತಾಯಿಸಿದ್ದಾನೆ. ಆದರೆ ಮಹಿಳೆ ಇದಕ್ಕೆ ನಿರಾಕರಿಸಿದ್ದಾಳೆ. ಇದರಿಂದ ಇಬ್ಬರ ಮಧ್ಯೆ ಮಾತಿನಚಕಮಕಿ ನಡೆದಿದ್ದು, ಕೋಪಗೊಂಡ ವಿಕಾಸ್ ಚಾಕು ಇರಿದು ಪರಾರಿಯಾಗಿದ್ದಾನೆ ೆಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








