ಬಿಹಾರದ ಮಾಜಿ ಮುಖ್ಯಮಂತ್ರಿ ನಿಧನ..!

ಬಿಹಾರ:

     ಬಿಹಾರದ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಮಿಶ್ರಾ ಇಂದು ನವದೆಹಲಿಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು ಮತ್ತು ಹಲವಾರು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ.ಮಿಶ್ರಾ ಅವರು ಮೂರು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅವರು ರಾಜ್ಯದ ಕೊನೆಯ ಕಾಂಗ್ರೆಸ್ ಮುಖ್ಯಮಂತ್ರಿಯೂ ಸಹ ಹೌದು. ಅವರು ಕೇಂದ್ರದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವರೂ ಆಗಿದ್ದರು.

    ರಾಜಕೀಯಕ್ಕೆ ಸೇರುವ ಮೊದಲು ಮಿಶ್ರಾ ಬಿಹಾರ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ಅವರು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ನಂತರ ಅವರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ತೊರೆದು ಜನತಾದಳ (ಯುನೈಟೆಡ್) ಗೆ ಸೇರಿದ್ದರು.

    ಮಿಶ್ರಾ ಬಹು ಕೋಟಿ ಮೇವು ಹಗರಣದಲ್ಲಿ ಆರೋಪಿಗಳಾಗಿದ್ದರೂ ರಾಂಚಿಯ ನ್ಯಾಯಾಲಯವು ಇತ್ತೀಚೆಗಷ್ಟೆ ಅವರನ್ನು ಖುಲಾಸೆಗೊಳಿಸಿತ್ತು.ಅವರ ಮಗ ನಿತೀಶ್ ಮಿಶ್ರಾ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸಂಪುಟದಲ್ಲಿ ಸಚಿವರಾಗಿದ್ದರು ,ಬಿಹಾರದಲ್ಲಿ ಪಕ್ಷದ  ನಾಯಕರು ಮಿಶ್ರಾ ಅವರ ನಿಧನಕ್ಕೆ ಸಂತಾಪ ಸೂಚಿಸಿದರು. “ಅವರು ರಾಜ್ಯದ ಪ್ರಮುಖ ನಾಯಕರು ಹಾಗು ಮತ್ಸದ್ದಿಯಾಗಿದ್ದರು ಎಂದಿದ್ದಾರೆ ಅವರ ಸಾವು ಬಿಹಾರ ರಾಜಕೀಯದಲ್ಲಿ ತುಂಬಲಾರದ ನಷ್ಟವನ್ನು ಉಂಟು ಮಾಡಿದೆ” ಎಂದು ಅವರು ಹೇಳಿದರು.

.   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap