ಹರಿಯಾಣ :
ಅತಂತ್ರ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಹರಿಯಾಣದಲ್ಲಿ ಯಾರು ಸರ್ಕಾರ ರಚನೆ ಮಾಡುತ್ತಾರೆ ಎಂಬ ಕುತೂಹಲಕ್ಕೆ ಬಹುತೇಕ ಉತ್ತರ ಸಿಕ್ಕಂತಾಗಿದೆ.
ಇರುವ 90 ವಿಧಾನಸಭಾ ಕ್ಷೇತ್ರದಲ್ಲಿ 40 ಸ್ಥಾನಗಳಲ್ಲಿ ಗೆದ್ದಿರುವ ಬಿಜೆಪಿ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು. ಆದರೆ ಅಧಿಕಾರ ಹಿಡಿಯುವುದಕ್ಕೆ ಅಗತ್ಯವಿರುವ 45 ಶಾಸಕರ ಸಂಖ್ಯಾಬಲಕ್ಕೆ ಕೊರತೆ ಎದುರಾಗಿ ಯಾರೇ ಸರ್ಕಾರ ರಚನೆ ಮಾಡಬೇಕಾದರೂ ಪಕ್ಷೇತರರು ಅಥವಾ ಹರ್ಯಾಣದ ಪ್ರಾದೇಶಿಕ ಪಕ್ಷ ಜೆಜೆಪಿಯ ಸಹಕಾರ ಅಗತ್ಯವಾಗಿದೆ.
ಜೆಜೆಪಿಯ ನಾಯಕ ದುಷ್ಯಂತ್ ಚೌಟಾಲ ಆರಂಭದಲ್ಲಿ ತಮ್ಮನ್ನು ಸಿಎಂ ಮಾಡುವ ಪಕ್ಷಕ್ಕೆ ನಾನು ಬೆಂಬಲ ನೀಡುತ್ತೇನೆ ಎಂದು ಹೇಳಿಕೆ ನೀಡಿದ್ದರು. ಈ ನಡುವೆ ಬಿಜೆಪಿ ಹರ್ಯಾಣದಲ್ಲಿ ಸರ್ಕಾರ ರಚನೆಗೆ ಸಿಕ್ಕ ಯಾವುದೇ ಅವಕಾಶವನ್ನೂ ಬಿಡದೇ ರಾಜಕೀಯ ತಂತ್ರ ಹೆಣೆಯುತ್ತಿದೆ. ಈಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ, ಇತ್ತೀಚಿನ ವರದಿಯ ಪ್ರಕಾರ, ಸರ್ಕಾರ ರಚನೆಗೆ ಜೆಜೆಪಿ ಬಿಜೆಪಿಗೆ ಬೆಂಬಲ ನೀಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ನಡುವೆ ಹರ್ಯಾಣದ ಹಾಲಿ ಸಿಎಂ ಮನೋಹರ್ ಲಾಲ್ ಖಟ್ಟರ್ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡನೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ