ಕಾಂಗ್ರೆಸ್ ಸೇರಿದ ಬಿಎಸ್‍ಪಿ ಲೋಕಸಭಾ ಅಭ್ಯರ್ಥಿ .!!

ಭೋಪಾಲ್:

        ಬಿ ಎಸ್ ಪಿ ಪಕ್ಷದಿಂದ ಟಿಕೆಟ್ ಪಡೆದು ನಂತರ ನಡೆದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಘಟನೆ ಜರುಗಿದೆ.ಈ ಕಾರಣದಿಂದಾಗಿ ಬಿಎಸ್‍ಪಿ ನಾಯಕಿ ಮಾಯಾವತಿ ಕಾಂಗ್ರೆಸ್  ಮೇಲೆ ಫುಲ್ ಗರಂ ಆಗಿದ್ದಾರೆ.

       ಗುನಾ ಲೋಕಸಭಾ ಕ್ಷೇತ್ರದ ಎಸ್‍ಪಿ-ಬಿಎಸ್‍ಪಿ ಅಭ್ಯರ್ಥಿಯಾಗಿರುವ ಲೋಕೇಂದ್ರ ಸಿಂಗ್ ರಜಪೂತ್  ನಿನ್ನೆಯಷ್ಟೇ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದರಿಂದ ಕೋಪಗೊಂಡ ಮಾಯಾವತಿ ಅವರು, ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ಅವರ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂದಕ್ಕೆ ಪಡೆಯುತ್ತೇವೆ ಎಂದು ಟ್ವೀಟ್ ಮೂಲಕ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

       ಸರ್ಕಾರದ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಳ್ಳುವಲ್ಲಿ ಕಾಂಗ್ರೆಸ್ ಕೂಡ ಬಿಜೆಪಿಗಿಂತ ಕಡಿಮೆ ಇಲ್ಲ. ಕಾಂಗ್ರೆಸ್ ಬಿಎಸ್‍ಪಿ ಅಭ್ಯರ್ಥಿಯನ್ನು ಬೆದರಿಸಿದೆ. ಆದರೆ ಬಿಎಸ್‍ಪಿ ಚಿಹ್ನೆ ಮೇಲೆಯ ಸ್ಪರ್ಧೆ ಮುಂದುವರಿಸಿ ಉತ್ತರಿಸಲಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‍ಗೆ ನೀಡಿರುವ ಬೆಂಬಲವನ್ನು ಪುನರ್ ಪರಿಗಣಿಸಲಾಗುತ್ತದೆ ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.

         ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ನಾಯಕರ ಪ್ರಚಾರವು ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಅವಕಾಶ ಮಾಡಿಕೊಡುತ್ತಿದೆ. ಆದರೆ ಬಿಎಸ್‍ಪಿ-ಎಸ್‍ಪಿ ಮೈತ್ರಿ ಗೆಲ್ಲಬಾರದು ಎನ್ನುವ ಕಾಂಗ್ರೆಸ್‍ನ ವಿಚಾರವು, ಜಾತಿ ಹಾಗೂ ಸಂಕುಚಿತ ಗುಣವನ್ನು ಪ್ರತಿಫಲಿಸುತ್ತದೆ. ಬಿಜೆಪಿ ಮಾತ್ರ ನಮ್ಮ ಒಕ್ಕೂಟವನ್ನು ಸೋಲಿಸಬಹುದೆಂದು ಜನರು ನಂಬುವುದು ಸರಿಯಾಗಿದೆ. ಜನರು ಜಾಗರೂಕರಾಗಿರಿ ಎಂದು ಮತದಾರರಿಗೆ ಮಾಯಾವತಿ ಟ್ವೀಟ್ ಮೂಲಕ ಕೇಳಿಕೊಂಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ