ಚೀನಾ ವಸ್ತುಗಳನ್ನು ಬಹಿಷ್ಕರಿಸಲು ಮುಂದಾದ ಸಿಎಐಟಿ…!

ನವದೆಹಲಿ:

        ಭಾರತಕ್ಕೆ ಚೀನಾದಿಂದ ಆಮದಾಗುವ ಸರಿಸುಮಾರು 3000 ವಸ್ತುಗಳನ್ನು ಬಹಿಷ್ಕರಿಸಲು ಸಿಎಐಟಿ ಪಟ್ಟಿಯೊಂದನ್ನು ತಯಾರಿಸಿದೆ ಎಂದು ತಿಳಿದು ಬಂದಿದೆ . ಚೀನಿ ವಸ್ತುಗಳನ್ನು ಬಹಿಷ್ಕರಿಸಲು ಸದ್ದಿಲ್ಲದೆ ಆಂದೋಲನವೊಂದು ಇದೀಗ ಆರಂಭಗೊಂಡಿದೆ. 

     ಭಾರತೀಯರು ಚೀನಾದ ವಸ್ತುಗಳಿಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ಇತ್ತೀಚೆಗೆ ಚೀನಾದ ಪತ್ರಿಯೊಂದು ವರದಿ ಮಾಡಿದ ಬೆನ್ನಲ್ಲೇ ದೇಶದ ಸ್ವಾಭಿಮಾನವನ್ನು ಎತ್ತಿಹಿಡಿಯಲು ಒಕ್ಕೂಟ ಈ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಗಡಿಯಲ್ಲಿ ಚೀನಾದ ಉದ್ಧಟತನ ಹೆಚ್ಚುತ್ತಿರುವುದರಿಂದ ಮತ್ತು ಇತ್ತೀಚೆಗೆ ಪ್ರಧಾನಿ ಮೋದಿಯವರು ಸ್ವದೇಶಿ ವಸ್ತುಗಳನ್ನು ಬಳಸುವಂತೆ ಕರೆ ನೀಡಿದ ಹಿನ್ನೆಲೆಯಲ್ಲಿ ಸಿಎಐಟಿಯ ಈ ನಿರ್ಣಯ ಮಹತ್ವವನ್ನು ಪಡೆದುಕೊಂಡಿದೆ. 

     ಚೀನಾ ವಸ್ತುಗಳ ಮಾರಾಟವನ್ನು ನಿಲ್ಲಿಸಲು ಒಕ್ಕೂಟವು ಭಾರತದಲ್ಲಿ ಸುಲಭವಾಗಿ ಉತ್ಪಾದಿಸಲು ಸಾಧ್ಯವಿರುವ. ಆದರೆ, ಸದ್ಯ ಚೀನಾದಿಂದ ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಂಡು ಮಾರುತ್ತಿರುವ ಸುಮಾರು 3000 ವಸ್ತುಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಒಕ್ಕೂಟದಲ್ಲಿ ದೇಶದ 7 ಕೋಟಿ ವ್ಯಾಪಾರಿಗಳಿದ್ದು, 40 ಸಾವಿರ ವ್ಯಾಪಾರಿ ಸಂಘಗಳು ಸದಸ್ಯರಾಗಿವೆ. ಇವರೆಲ್ಲರೂ ಚೀನಿ ವಸ್ತುಗಳ ಮಾರಾಟ ನಿಲ್ಲಿಸಿದರೆ ಸ್ವದೇಶಿ ಆಂದೋಲನಕ್ಕೆ ದೊಡ್ಡ ಬೆಂಬಲ ಸಿಗಲಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap