ಕೇಂದ್ರದಿಂದ ಎಸಿ ಮತ್ತು ಫ್ರಿಡ್ಜ್ ಆಮದು ನಿಷೇಧ : ತಂಡಾ ಹೊಡೆದ ಚೀನಾ ಮತ್ತು ಥಾಯ್ಲೆಂಡ್​

ನವದೆಹಲಿ:

    ಸ್ಥಳೀಯ ಉತ್ಪಾದನಾ ಕ್ಷೇತ್ರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ,  ಎಸಿ (ಏರ್​ ಕಂಡಿಷನರ್​) ಮತ್ತು ರೆಫ್ರಿಜರಂಟ್ಸ್ ಉತ್ಪನ್ನಗಳ ಆಮದನ್ನು ನಿಷೇಧಿಸಿದೆ. ಚೀನಾ ಮತ್ತು ಥಾಯ್ಲೆಂಡ್​ನಿಂದ ಆಮದಾಗುತ್ತಿದ್ದ ಈ ಉತ್ಪನ್ನಗಳ ಆಮದು ನಿಷೇಧ ಆದೇಶವನ್ನು ಸರ್ಕಾರ ಗುರುವಾರ ರಾತ್ರಿ ಪ್ರಕಟಿಸಿದೆ.

    ಟೆಲಿವಿಷನ್ ಸೆಟ್​ಗಳ ಮೇಲಿನ ಆಮದು ನಿಷೇಧವನ್ನು ಕೇಂದ್ರ ಸರ್ಕಾರ ಜುಲೈ ತಿಂಗಳಲ್ಲಿ ಪ್ರಕಟಿಸಿತ್ತು. ಆಮದು ಮಾಡಬೇಕು ಎಂದರೆ ಆಮದುದಾರರು ಡೈರೆಕ್ಟರೇಟ್​ ಜನರಲ್​ ಆಫ್ ಫಾರಿನ್ ಟ್ರೇಡ್​ನಿಂದ ಅನುಮತಿ, ಪರವಾನಗಿ ಪಡೆಯಬೇಕು ಎಂದು ನಿರ್ದೇಶಿಸಿತ್ತು. ಏರ್ ಕಂಡಿಷನರ್ (ಎಸಿ) ಮೇಲಿನ ಆಮದು ನಿಷೇಧ ಎಂದರೆ, ಯಾವುದೇ ರೀತಿಯಲ್ಲೂ ಅವುಗಳನ್ನು ಆಮದುಮಾಡಿಕೊಳ್ಳುವಂತಿಲ್ಲ.

    ಭಾರತಕ್ಕೆ ಬರುವ ಬಹುತೇಕ ಏರ್​ಕಂಡಿಷನರ್​ಗಳಲ್ಲಿ ರೆಫ್ರಿಜರಂಟ್ಸ್​ ತುಂಬಿಕೊಂಡೇ ಇರುತ್ತದೆ. 2020ನೇ ಸಾಲಿನ ಹಣಕಾಸು ವರ್ಷದಲ್ಲಿ ಭಾರತ ಒಟ್ಟು 649 ದಶಲಕ್ಷ ಡಾಲರ್ ಮೌಲ್ಯದ ಸ್ಪಿಲ್ಟ್ ಏರ್​ಕಂಡಿಷನರ್​ಗಳನ್ನು ಆಮದು ಮಾಡಿಕೊಂಡಿದೆ. ಇದರಲ್ಲಿ ಚೀನಾದಿಂದ 241 ದಶಲಕ್ಷ ಡಾಲರ್​ಗಳಾದ್ದಾದರೆ, ಥಾಯ್ಲೆಂಡ್​ನಿಂದ 189 ದಶಲಕ್ಷ ಡಾಲರ್​ಗಳ ಎಸಿಗಳು. ಅದೇ ರೀತಿ, 35 ದಶಲಕ್ಷ ಡಾಲರ್ ಮೌಲ್ಯದ ವಿಂಡೋ ಏರ್ ಕಂಡಿಷನರ್​ಗಳನ್ನು ಆಮದುಮಾಡಿಕೊಂಡಿದ್ದು, ಇದರಲ್ಲಿ ಚೀನಾದಿಂದ 14 ದಶಲಕ್ಷ ಡಾಲರ್​, ಥಾಯ್ಲೆಂಡ್​ನಿಂದ 18 ದಶಲಕ್ಷ ಡಾಲರ್ ಮೌಲ್ಯದ ಏರ್​ಕಂಡಿಷನರ್​ಗಳು ಸೇರಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap