ಗಣರಾಜ್ಯೋತ್ಸವ ಪೆರೆಡ್ : ಪ.ಬಂಗಾಳಕ್ಕೆ ಶಾಕ್ ನೀಡಿದ ಕೇಂದ್ರ ಸರ್ಕಾರ

ಕೊಲ್ಕತ್ತಾ:

    ಇದೇ ತಿಂಗಳು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ನಲ್ಲಿ ನಡೆಯುವ ಸ್ತಬ್ದಚಿತ್ರ ಪರೆಡ್ ನಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಪ್ರಸ್ತಾಪಿಸಿದ್ದ ಸ್ತಬ್ಧ ಚಿತ್ರವನ್ನು  ಕೇಂದ್ರ ಸರ್ಕಾರ ತಿರಸ್ಕರಿಸಿದೆ ಇದರಿಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಕೇಂದ್ರ ಸರ್ಕಾರದ ನಡುವೆ ಮತ್ತೊಂದು ಭಿನ್ನಾಭಿಪ್ರಾಯ ಉಂಟಾಗಿದೆ. 

   ಪ. ಬಂಗಾಳ ಪ್ರಸ್ತಾಪಿತ ಸ್ತಬ್ಧಚಿತ್ರವನ್ನು ಎರಡು ಸುತ್ತಿನ ಸಭೆಯಲ್ಲಿ ತಜ್ಞರ ಸಮಿತಿ ಪರೀಶಿಲಿಸಿದ್ದು, ಎರಡನೇ ಸಭೆಯಲ್ಲಿ ಚರ್ಚಿಸಿದ ಬಳಿಕ  ಸಮಿತಿಯಿಂದ ಮುಂದಿನ ಪರಿಗಣನೆಗಾಗಿ ತೆಗೆದುಕೊಂಡಿಲ್ಲ ಎಂದು ಸಚಿವಾಲಯ  ತನ್ನ ಹೇಳಿಕೆಯಲ್ಲಿ ತಿಳಿಸಿದೆ. 

   ಪರೇಡ್ ಗಾಗಿ 16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ, ಆರು ಸಚಿವಾಲಯಗಳು ಮತ್ತು ಇಲಾಖೆಗಳ 22 ಪ್ರಸ್ತಾಪಿತ ಸ್ತಬ್ಧ ಚಿತ್ರಗಳ ಕಿರುಪಟ್ಟಿಯನ್ನು ತಯಾರಿಸಲಾಗಿದೆ.  32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 24 ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಪ್ರಸ್ತಾಪಿತ 56ಕ್ಕೂ ಹೆಚ್ಚು ಸ್ತಬ್ಧಚಿತ್ರಗಳ ಸಂಗ್ರಹವನ್ನು ಕಿರುಪಟ್ಟಿಗಾಗಿ  ಕೇಂದ್ರಸರ್ಕಾರ ಸ್ವೀಕರಿಸಲಾಗಿತ್ತು.
   ಸಂದೇಶ, ಪರಿಕಲ್ಪನೆ, ವಿನ್ಯಾಸ, ದೃಶ್ಯ ಸಂಯೋಜನೆ ಆಧಾರದ ಮೇಲೆ ತಜ್ಞರ ಸಮಿತಿ ಪ್ರಸ್ತಾಪಿತ ಸ್ತಬ್ಧಚಿತ್ರಗಳನ್ನು ಪರಿಶೀಲಿಸಿದೆ. ಸಮಯದ ಅಭಾವದ ಹಿನ್ನೆಲೆಯಲ್ಲಿ ಪರೇಡ್ ನಲ್ಲಿ ಪಾಲ್ಗೊಳ್ಳುವ ಸ್ತಬ್ಧಚಿತ್ರಗಳ ಸಂಖ್ಯೆಯನ್ನು ಮಿತಿಗೊಳಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap