ನವದೆಹಲಿ:

ಭಾರತ ಪಾಕಿಸ್ತಾನದ ಮೇಲೆ ಏರ್ ಸ್ಟ್ರೈಕ್ ಮಾಡಿದ ಬಳಿಕ ಪಾಕಿಸ್ತಾನದ ಅತ್ಯಂತ ಪರಮಾಪ್ತ ದೇಶವಾದ ಚೀನಾ ಕೂಡ ಪಾಕಸ್ತಾನದ ಪರವಾಗಿ ಮಾತನಾಡುತ್ತಿಲ್ಲ ಎಂದು ಪಾಕಿಸ್ತಾನದ ಮಾಜಿ ರಾಯಭಾರಿ ಹುಸೇನ್ ಹಕ್ಕಾನಿ ತಮ್ಮ ಅಳಲನ್ನು ಹೊರಹಾಕಿದ್ದಾರೆ .
ಐಎಎಫ್ ಮಾಡಿದ ಏರ್ ಸ್ಟ್ರೈಕ್ ಬಳಿಕ ಪ್ರಪಂಚದಲ್ಲಿ ಉಗ್ರರಿಗೆ ಉಳಿಗಾಲವಿಲ್ಲ ಎನ್ನುವ ಸಂದರ್ಭ ಸೃಷ್ಟಿಯಾಗಿಬಿಟ್ಟಿದೆ. ಭಯೋತ್ಪಾದನ ಕೃತ್ಯಗಳು ಜನರ ತಾಳ್ಮೆಯನ್ನು ಪರೀಕ್ಷಿಸುತ್ತಿವೆ. ಇದಕ್ಕೆ ಸಾಕ್ಷಿಯೇ ಪಾಕ್ ಬೆಂಬಲಕ್ಕೆ ಯಾರೂ ನಿಲ್ಲುತ್ತಲೇ ಇಲ್ಲ ಎಂದು ಹಕ್ಕಾನಿ ತಿಳಿಸಿದರು.
ಫೆಬ್ರವರಿ 14ರಂದು ಭಯೋತ್ಪಾದಕರು ಪುಲ್ವಾಮಾ ದಾಳಿ ಬಳಿಕ ಭಾರತದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.ಉಗ್ರ ದಾಳಿಯಾದ 12ನೇ ದಿನಕ್ಕೆ ಭಾರತ ಪಾಕ್ ನ ಹುಟ್ಟಡಗಿಸಿದೆ. 40 ಯೋಧರ ಬಲಿದಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಹಾತೊರೆಯುತ್ತಿದ್ದ ಭಾರತೀಯ ವಾಯುಪಡೆ, ಗಡಿ ನಿಯಂತ್ರಣ ರೇಖೆ ದಾಟಿ ಪಾಕ್ ನ ಮೂರು ಉಗ್ರ ಕ್ಯಾಂಪ್ ಗಳ ಮೇಲೆ ದಾಳಿ ನಡೆಸಿ 350 ಜನರನ್ನು ಬಲಿ ಪಡೆಯುವ ಮೂಲಕ ಉಗ್ರರಿಗೆ ತಕ್ಕ ಪಾಠ ಕಲಿಸಿದೆ.
ಪಾಕಿಸ್ತಾನದ ಬೆಳವಣಿಗಿಗೆ ತಾನೆ ಪೋಷಿಸುತ್ತಿರುವ ಉಗ್ರರೇ ಮಗ್ಗುಲ ಮುಳ್ಳಾಗಿರುವುದಂತು ಸತ್ಯ ಮುಳ್ಳನ್ನು ಎಷ್ಟು ಬೇಗ ಕೀಳುತ್ತಾರೋ ಅಷ್ಟೂ ಒಳ್ಳೆಯದು ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
