ಜೈಪುರ: 

ಕಳೆದ ಕೆಲ ದಶಕಗಳ ಕಾಲ ಆಳಿದ ಗಾಂಧಿ ( ಇಂದಿರಾ ಗಾಂಧಿ ನಂತರ ) ಕುಟುಂಬದ ಆಡಳಿತಕ್ಕೆ ಬ್ರೇಕ್ ಹಾಕಿದ ಬಿಜೆಪಿ ಈಗ ಮತ್ತೊಂದು ಅವಧಿಗೆ ಆಡಳಿತ ನಡೆಸುವ ಹೆಬ್ಬಯಕೆ ಹೊದಿದ್ದು ಅದರ ಒಂದು ಭಾಗವಾಗಿ ರಾಜಸ್ಥಾನ ಚುನಾವಣೆಯಲ್ಲಿ ತನ್ನ ಆಧಿಪತ್ಯ ಮೆರೆಯಲು ಚಾಣಕ್ಯ ತಂತ್ರ ಉಪಯೋಗಿಸಿ ಕಾಂಗ್ರೇಸ್ ನ ವಂಶವಾಹಿ ಹಾಗೂ ಓಲೈಕೆಯ ಜಾತಿ ರಾಜಕರಾಣವನ್ನು ಮತದಾರರು ನಿರ್ಲಕ್ಷ್ಯಿಸಬೇಕೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರೆ ನೀಡಿದ್ದಾರೆ.
ಸದ್ಯರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಗ್ರಾಸವಾಗಿರುವಂತಹ ರಾಜ್ಯ ರಾಜಸ್ತಾನ ಬಿಜೆಪಿಯ ಭದ್ರಕೊಟೆಯೆಂದೇ ಬಿಂಬಿತವಾಗಿರುವ ರಾಜ್ಯವಿದು ಇದನ್ನು ಶತಾಯ ಗತಾಯ ಗೆಲ್ಲಲೇ ಬೇಕಾದ ಅನಿವಾರ್ಯತೆ ಬಿಜೆಪಿಗೆ ಎದುರಾಗಿದೆ ಅದ್ದಕ್ಕಾಗಿ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ನಂತರ, ಚುನಾವಣಾ ಪ್ರಚಾರ ಸಬೆಯಲ್ಲಿ ಮಾತನಾಡಿದ ಅಮಿತ್ ಶಾ., ಜಾತಿ ರಾಜಕಾರಣವನ್ನು ಅಲಕ್ಷ್ಯಮಾಡಿ,. ಬಿಜೆಪಿ ರಾಮ ಮಂದಿರ ಕಟ್ಟಲು ಬದ್ಧವಾಗಿದೆ ಎಂದು ಹೇಳಿದ್ದಾರೆ. ಕಳೆದ 50 ವರ್ಷಗಳಿಂದ ವಂಶವಾಹಿ ಜಾತಿ ರಾಜಕಾರಣದ ಯೋಜನೆಗಳಿಂದ ಪಂಚಾಯಿತ್ ನಿಂದ ಪಾರ್ಲಿಮೆಂಟ್ ವರೆಗೆ ಅಧಿಕಾರ ನಡೆಸಿದೆ. ಕಾಂಗ್ರೇಸ್ ಪ್ರಜಾಪ್ರಭುತ್ವ ನಾಶ ಮಾಡುತ್ತಿದೆ ಎಂದು ಹೇಳಿದ್ದಾರೆ.
