ಕೊರೊನಾ ಸೋಂಕು ಸಾಂಕ್ರಾಮಿಕ ರೋಗ : ವಿಶ್ವ ಆರೋಗ್ಯ ಸಂಸ್ಥೆ

ನವದೆಹಲಿ:

     ಐಟಿ ಕಂಪನಿಗಳಾದ ಡೆಲ್ ಮತ್ತು ಮೈಂಡ್ ಟ್ರೀಯ ಇಬ್ಬರು ಟೆಕ್ಕಿಗಳಿಗೆ ಕೊರೋನಾ ವೈರಸ್ ಪಾಸಿಟಿವ್ ಕಂಡುಬಂದಿದ್ದು,ಮಾತ್ರವಲ್ಲದೆ ವಾಣಿಜ್ಯ ನಗರಿ ಮುಂಬೈನಲ್ಲಿ ಮತ್ತೆರಡು ಪ್ರಕರಣಗಳು ಬೆಳಕಿಗೆ ಬಂದಿದೆ.  ಇದರೊಂದಿಗೆ ಭಾರತದಲ್ಲಿ ಕೊರೋನಾ ವೈರಸ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ 68ಕ್ಕೆ ಏರಿಕೆಯಾಗಿದೆ. 

    ಹೆಚ್ಚುತ್ತಿರುವ ಸೋಂಕಿನ ಪ್ರಕರಣಗಳ ಮಧ್ಯೆ ಕರೋನವೈರಸ್ ಸಾಂಕ್ರಾಮಿಕ ರೋಗವೆಂದು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ಮಹತ್ವದ ಘೋಷಣೆ ಮಾಡಿದೆ.

    ಬುಧವಾರ  ಮುಂಬೈ ಮಾತ್ರವಲ್ಲದೆ  ದೆಹಲಿ ಮತ್ತು ರಾಜಸ್ಥಾನದಿಂದ ತಲಾ ಒಂದು. ಪ್ರಕರಣ ವರದಿಯಾಗಿದೆ. 

    ಇತ್ತೀಚಿಗೆ ಅಮೆರಿಕಕ್ಕೆ ಭೇಟಿ ನೀಡಿದ್ದ ಡೆಲ್ ಉದ್ಯೋಗಿಗೆ ಹಾಗೂ ವಿದೇಶ ಪ್ರವಾಸ ಕೈಗೊಂಡಿದ್ದ ಮೈಂಡ್ ಟ್ರೀಯ ಉದ್ಯೋಗಿಗಳಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ ಎಂದು ಎರಡು ಕಂಪನಿಗಳು ಪ್ರತ್ಯೇಕವಾಗಿ ಪ್ರಕಟಣೆಯಲ್ಲಿ ತಿಳಿಸಿವೆ.

    ಅಮೆರಿಕದಿಂದ ವಾಪಸ್ ಆದ ನಮ್ಮ ಕಂಪನಿಯ ಇಬ್ಬರು ಉದ್ಯೋಗಿಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಇಬ್ಬರ ಪೈಕಿ ಒಬ್ಬರಿಗೆ ಕೊರೋನಾ ವೈರಸ್ ಪಾಸಿಟಿವ್ ಪತ್ತೆಯಾಗಿದೆ ಎಂದು ಡೆಲ್ ಕಂಪನಿ ತಿಳಿಸಿದೆ.

     ವಿದೇಶ ಪ್ರವಾಸದಿಂದ ವಾಪಸ್ ಬಂದ ನಮ್ಮ ಕಂಪನಿಯ ಓರ್ವ ಉದ್ದೋಗಿಗೆ ಕೊರೋನಾ ವೈರಸ್ ಪಾಸಿಟಿವ್ ಕಂಡುಬಂದಿದೆ ಎಂದು ಮೈಂಡ್ ಟ್ರೀ ಪ್ರಕಟಣೆಯಲ್ಲಿ ತಿಳಿಸಿದೆ.

    ನಮ್ಮ ಕಂಪನಿಯ ಉದ್ಯೋಗಿ ಮತ್ತು ಆತನ ಕುಟುಂಬವನ್ನು ವೈದಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಉದ್ದೋಗಿಯೇ ಸ್ವಯಂಪ್ರೇರಿತವಾಗಿ ನಿರ್ಬಂಧ ವಿಧಿಸಿಕೊಂಡಿದ್ದು, ಅವರು ನಮ್ಮ ಕಚೇರಿಗೆ ಬಂದಿಲ್ಲ ಮತ್ತು ಯಾವುದೇ ಸಹದ್ಯೋಗಿಗಳನ್ನು ಭೇಟಿ ಮಾಡಿಲ್ಲ ಎಂದು ಮೈಂಡ್ ಟ್ರೀ ಸ್ಪಷ್ಟಪಡಿಸಿದೆ.

    ಇದಕ್ಕು ಮತ್ತು ದೆಹಲಿಯಲ್ಲಿ ಮತ್ತು ರಾಜಸ್ಥಾನದಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದ್ದು, ಇಟಲಿಯ 16 ಪ್ರವಾಸಿಗರು ಸೇರಿದಂತೆ ಒಟ್ಟು 68 ಮಂದಿಗೆ ಕೊರೋನಾ ವೈರಸ್ ಪಾಸಿಟಿವ್ ಕಂಡುಬಂದಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

 

Recent Articles

spot_img

Related Stories

Share via
Copy link
Powered by Social Snap