ದಿನಕರನ್ ಗೆ ಕುಕ್ಕರ್ ಚಿಹ್ನೆ ನೀಡಲು ಸಾಧ್ಯವಿಲ್ಲ ಎಂದ ಸುಪ್ರೀಂ..!!

ನವದೆಹಲಿ:

     ತಮ್ಮ ಪಕ್ಷದ ಚುನಾವಣಾ ಗುರುತಾಗಿ ಕುಕ್ಕರ್ ಚಿಹ್ನೆ ನೀಡಬೇಕಾಗಿ ಟಿಟಿವಿ ಪಾರ್ಟಿಯ ದಿನಕರನ್ ಅವರು ಕೇಳಿಕೊಳ್ಳತ್ತದ್ದು, ಅದನ್ನು ಒಪ್ಪಿಕೊಳ್ಳಲು ಸಾದ್ಯವಿಲ್ಲ ಎಂದು ಸುಪ್ರೀಂಕೋರ್ಟ್ ನ ವಿಭಾಗೀಯ ಪೀಠ ತಿಳಿಸಿದೆ.

      ಮುಂಬರುವ  ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಲೋಕಸಭಾ ಹಾಗೂ ವಿಧಾನಸಭಾ ಉಪ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳಿಗೆ ಯಾವುದಾದರು ಒಂದು ಗುರುತನ್ನು ನೀಡುವಂತೆ ಚುನಾವಣಾ ಆಯೋಗಕ್ಕೆ ವಿಭಾಗೀಯ ಪೀಠ ಆದೇಸ ನೀಡಿದೆ.

    ಸಾಮಾನ್ಯ ಚುನಾವಣಾ ಗುರುತನ್ನು ಪರಿಗಣಿಸುವಂತೆ  ಮುಖ್ಯ ನ್ಯಾಯಾಧೀಶ ರಂಜನ್ ಗೋಗಯ್ ನೇತೃತ್ವದ ನ್ಯಾಯಪೀಠ ಚುನಾವಣಾ ಆಯೋಗಕ್ಕೆ ತಿಳಿಸಿದ್ದು, ದಿನಕರ್  ಗುಂಪಿನ ಅಭ್ಯರ್ಥಿಗಳನ್ನು ರಾಜಕೀಯ ಪಕ್ಷ ಎಂದು ಪರಿಗಣಿಸುವಂತಿಲ್ಲ, ರಾಜಕೀಯ ಉದ್ದೇಶಗಳಿಗಾಗಿ ಸ್ವತಂತ್ರ ಅಭ್ಯರ್ಥಿಗಳೆಂದು ಪರಿಗಣಿಸಬಹುದು ಎಂದು ಹೇಳಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link