ಲಾಕ್ ಡೌನ್ ನಡುವೆಯೂ ತರಗತಿಗಳನ್ನು ಆರಂಭಿಸಿದ ಧಿರುಭಾಯ್ ಅಂಬಾನಿ ಶಾಲೆ

ಮುಂಬೈ

     ಭಾರತದಲ್ಲಿ ಪ್ರಮುಖ ಅಂತರರಾಷ್ಟ್ರೀಯ ಶಾಲೆಗಳಲ್ಲಿ ಒಂದಾಗಿರುವ ಧಿರುಭಾಯ್ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ (ಡಿಎಐಎಸ್) ತನ್ನ ವಿದ್ಯಾರ್ಥಿಗಳಿಗೆ ಲೈವ್ ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸಿದೆ.

      ಆನ್‌ಲೈನ್ ಮೀಟಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿಕೊಂಡು, ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ವೀಡಿಯೊ ಕ್ಲಾಸ್‌ ರೂಮ್‌ಗೆ ಹಾಜರಾಗಲಿದ್ದಾರೆ ಮತ್ತು ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳ ಹಾಜರಾತಿಯನ್ನು ಪಡೆಯಲಿದ್ದು, ಲೈವ್‌ನಲ್ಲಿಯೇ ಆನ್‌ಲೈನ್ ತರಗತಿಗಳನ್ನು ನಡೆಸಲಾಗುತ್ತದೆ.

      ರಿಲಯನ್ಸ್ ಜಿಯೋ ಒದಗಿಸುವ ಬ್ಯಾಂಡ್‌ವಿಡ್ತ್ ಮತ್ತು ಸಂಪರ್ಕದೊಂದಿಗೆ ತರಗತಿಗಳನ್ನು ನಡೆಸಲು ಶಾಲೆಯು ಮೈಕ್ರೋಸಾಫ್ಟ್ ಟೀಮ್ಸ್‌ ವೇದಿಕೆಯಾಗಿ ಬಳಸುತ್ತಿದೆ. ಇದನ್ನೇ ಶಿಕ್ಷಕರು ಪರಸ್ಪರ ಸಹಯೋಗ ಮತ್ತು ಯೋಜನೆಗಾಗಿ ಬಳಸುತ್ತಿದ್ದಾರೆ. ಇದಲ್ಲದೆ, ಆನ್‌ಲೈನ್ ತರಗತಿಗಳನ್ನು ನಡೆಸಲು ಶಾಲೆಯು ವೈಟ್‌ಬೋರ್ಡ್ ಪ್ಲಾಟ್‌ಫಾರ್ಮ್ ಅನ್ನು ಸಹ ಬಳಸುತ್ತದೆ.

ಆನ್‌ಲೈನ್ ಲೈವ್ ಟೀಚಿಂಗ್ 10ನೇ ಮತ್ತು 12ನೇ ವಿದ್ಯಾರ್ಥಿಗಳಿಗೆ ಇಂದಿನಿಂದ ಆರಂಭವಾಗಿದ್ದು, ಪೂರ್ಣ ದಿನದ ತರಗತಿಗಳು ನಡೆಯಿತು. ಮುಂದಿನ 4-5 ದಿನಗಳಲ್ಲಿ ಶಾಲೆಯು ಎಲ್ಲಾ ವಿದ್ಯಾರ್ಥಿಗಳಿಗೆ ಲೈವ್ ಆನ್‌ಲೈನ್ ತರಗತಿಗಳನ್ನು ವಿಸ್ತರಿಸಲಿದೆ. ನಿಗದಿಯಂತೆ, ಮಾರ್ಚ್ 13 ರಿಂದ 25 ರವರೆಗಿನ ವಿರಾಮದ ನಂತರ ಹೊಸ ಶೈಕ್ಷಣಿಕ ವರ್ಷದ ಅಧ್ಯಾಯನಕ್ಕಾಗಿ ಆನ್‌

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link