ನವದೆಹಲಿ:
ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ತಾಯಿ ಹಾಗೂ ಪತ್ನಿಗೆ ಇಡಿ ವಿಚಾರಣೆಯಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.ಡಿಕೆಶಿ ಪತ್ನಿ ಉಷಾ ಅವರು ನಾಳೆ ವಿಚಾರಣೆಗೆ ಹಾಜರಾಗಬೇಕೆಂದಿಲ್ಲ. ಹಾಗೆಯೇ ಗೌರಮ್ಮ ಅವರಿಗೆ ನೀಡಿದ್ದ ಸಮನ್ಸ್ ಕೂಡ ವಾಪಸ್ ಪಡೆದುಕೊಂಡಿದ್ದು, ಹೊಸದಾಗಿ ಸಮನ್ಸ್ ಕಳುಹಿಸುವುದಾಗಿ ಇಡಿ ಅಧಿಕಾರಿಗಳು ದೆಹಲಿ ಹೈಕೋರ್ಟಿನಲ್ಲಿ ತಿಳಿಸಿದ್ದಾರೆ.
ಡಿಕೆಶಿ ಪತ್ನಿ ಹಾಗೂ ತಾಯಿ ಸಮನ್ಸ್ ರದ್ದು ಕೋರಿ ದೆಹಲಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ನ್ಯಾ ಬ್ರಿಜೇಶ್ ಸೇಥಿ ನೇತೃತ್ವದ ಏಕ ಸದಸ್ಯ ಪೀಠದಲ್ಲಿ ಈ ಅರ್ಜಿಯ ವಿಚಾರಣೆ ಇಂದು ನಡೆದಿದ್ದು, ಉಷಾ, ಗೌರಮ್ಮ ಪರ ವಕೀಲ ದಯಾನ್ ಕೃಷ್ಣನ್ ವಾದ ಮಂಡಿಸಿ, ಬೇರೆ ಕೋರ್ಟ್ ಗಳ ತೀರ್ಪು ಉಲ್ಲೇಖ ಮಾಡುವ ಮೂಲಕ ಒಂದೇ ಪ್ರಕರಣವನ್ನು ಇಡಿ ಎಲ್ಲರ ಮೇಲು ಹೇರಲು ನೋಡುತ್ತಿದೆ. ಒಂದೇ ಪ್ರಕರಣದಲ್ಲಿ ಡಿಕೆಶಿ ಪತ್ನಿ ಉಷಾ ಮತ್ತು ಗೌರಮ್ಮ ಅವರಿಗೆ ನೊಟೀಸ್ ನೀಡಿದೆ. ಬೇರೆ ಪ್ರಕರಣದಲ್ಲಿ ಗೌರಮ್ಮ ಅವರಿಂದ ಡಿ.ಕೆ ಸುರೇಶ್ ಗೆ ಜಮೀನು ವರ್ಗ ಮಾಡಿರುವ ಹಿನ್ನೆಲೆಯಲ್ಲಿ ನೊಟೀಸ್ ನೀಡಲಾಗಿದೆ ೆಂದಿದ್ದಲ್ಲದೆ ವಿಚಾರಣೆಗೆ ಹಾಜರಾಗುವುದರಿಂದ ಮಹಿಳೆಯರಿಗೆ ವಿನಾಯಿತಿ ಇದೆ ಎಂದು ವಾದಿಸಿದ್ದಾರೆ ಎನ್ನಲಾಗಿದೆ.ಅಲ್ಲದೆ ಕಾನೂನಿನ ಪ್ರಕಾರ15 ವರ್ಷಕ್ಕಿಂತ ಕೆಳಗಿರುವ ಮತ್ತು 85 ವರ್ಷದಕ್ಕಿಂತ ಮೇಲ್ಪಟ್ಟವರನ್ನು ಪೋಲೀಸ್ ಸ್ಟೇಷನ್ ಗೆ ವಿಚಾರಣೆಗೆ ಕರೆಸಲು ಸಾಧ್ಯವಿಲ್ಲ. ಪ್ರಕರಣದಲ್ಲಿ ಗೌರಮ್ಮ ಮತ್ತು ಉಷಾ ಅವರಿಗೆ ನೊಟೀಸ್ ಕೊಡುವ ಅಗತ್ಯ ಇರಲಿಲ್ಲ ಎಂದು ಕೃಷ್ಣನ್ ವಾದ ಮಂಡಿಸಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
