ಬುಲಂದ್‌ಶಹರ್:
ಮಾಜಿ ಸಂಸದ ಕಮಲೇಶ್ ಬಾಲ್ಮಿಕಿಯವರು ಅನುಮಾನಾಸ್ಪದ ರೀತಿಯಲ್ಲಿ ಸತ್ತಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಅವರದೇ ಮನೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.ಉತ್ತರ ಪ್ರದೇಶದ ಪ್ರತಿಷ್ಠತ ಕ್ಷೇತ್ರಗಳಲ್ಲಿ ಒಂದಾದ ಬುಲಂದ್ ಶಹರ್ ಲೋಕಸಭಾ ಕ್ಷೇತ್ರದ ಮಾಜಿ ಸಂಸದರೂ ಆಗಿದ್ದ ಬಾಲ್ಮಿಕಿ ಅವರ ಮೃತದೇಹ ಖರ್ಜಾದಲ್ಲಿರುವ ತಮ್ಮ ನಿವಾಸದಲ್ಲಿ ಸೋಮವಾರ ಪತ್ತೆಯಾಗಿದೆ.
ಪ್ರಾಥಮಿಕ ತನಿಖೆಯಿಂದ ಅವರ ಸಾವು ವಿಷ ಪ್ರಾಶನದಿಂದ ಸಾವು ಸಂಭವಿಸಿದೆ ಎಂದು ತಿಳಿದುಬಂದಿದೆ ಶವವನ್ನು ಮರಣೋತ್ತರ ಪರೀಕ್ಷೆಗೆ ಒಯ್ಯಲಾಗಿದೆ ಸಂಪೂರ್ಣ ವರದಿ ಬಂದ ಬಳಿಕ ಹೆಚ್ಚಿನ ವಿವರ ತಿಲಿಯಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವರ ಮೃತದೇಹ ದೊರೆತ ಕೋಣೆ ಒಳಗಡೆಯಿಂದ ಲಾಕ್ ಆಗಿತ್ತು. ಬಾಲ್ಮಿಕಿ ಕುಟುಂಬಸ್ಥರು ಪ್ರಯಾಸದಿಂದ ಕೋಣೆ ತೆರೆದಾಗ ಒಳಗೆ ಶವವಾಗಿ ಮಲಗಿದ್ದ ಬಾಲ್ಮಿಕಿ ಕಂಡು ಎಂದು ಪೋಲೀಸರು ತಿಳಿಸಿದ್ದಾರೆ ಎನ್ನಲಾಗಿದೆ.
ಬಾಲ್ಮಿಕಿಯವರು 2009ರ ಲೋಕಸಭಾ ಚುನಾವಣೆಯಲ್ಲಿ ಬುಲಂದ್‌ಶಹರ್ ಕ್ಷೇತ್ರದಿಂದ ಸಮಾಜವಾದಿ ಪಕ್ಷದಿಂದ ಸಂಸದರಾಗಿ ಆಯ್ಕೆಯಾಗಿದ್ದರು.