ಕತುವಾ : ನರಮೇಧ ತಪ್ಪಿಸಿದ ಜಾಗೃತ ಗ್ರಾಮಸ್ಥ!

ಕತುವಾ:

    ಕತುವಾದಲ್ಲಿ ಅಂತಾರಾಷ್ಟ್ರೀಯ ಗಡಿಯ ಬಳಿ ಇರುವ ಗ್ರಾಮದ ಮೇಲೆ ಮಂಗಳವಾರ ಸಂಜೆ ಭಯೋತ್ಪಾದಕ ದಾಳಿ ನಡೆದಿದೆ. ಘಟನೆಯಲ್ಲಿ ಓರ್ವ ಸಿಆರ್ ಪಿಎಫ್ ಯೋಧ ಹಾಗೂ ಶಂಕಿತ ಪಾಕ್ ಉಗ್ರ ಸಾವನ್ನಪ್ಪಿದ್ದು, ಓರ್ವ ನಾಗರಿಕ ಗಾಯಗೊಂಡಿದ್ದಾರೆ.

    ಈ ಎಲ್ಲಾ ಘಟನಾವಳಿಗಳ ನಡುವೆ ಗ್ರಾಮದಲ್ಲಿದ್ದ ಓರ್ವ ಜಾಗೃತ ವ್ಯಕ್ತಿಯಿಂದಾಗಿ ಸಂಭವಿಸಬಹುದಾಗಿದ್ದ ಭಾರಿ ಅನಾಹುತವೊಂದು ತಪ್ಪಿದೆ. ಇಬ್ಬರು ಶಸ್ತ್ರಸಜ್ಜಿತ ಉಗ್ರರ ಬಗ್ಗೆ ಗ್ರಾಮದ ಜನತೆಗೆ ಮಾಹಿತಿ ನೀಡಿದ್ದು, ಸ್ಥಳೀಯರು ತಪ್ಪಿಸಿಕೊಂಡು ಸುರಕ್ಷಿತ ಪ್ರದೇಶಗಳಿಗೆ ತೆರಳಲು ಸಾಧ್ಯವಾಗಿದೆ ಈ ಮೂಲಕ ಕಾಶ್ಮೀರದಲ್ಲಿ ಸಂಭವಿಸಬಹುದಾಗಿದ್ದ ನರಮೇಧವೊಂದು ತಪ್ಪಿದೆ.

     ಉಗ್ರರ ದಾಳಿಯಿಂದ ಈ ಪ್ರದೆಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಓರ್ವ ಭಯೋತ್ಪಾದಕ ಇನ್ನಷ್ಟೇ ಪತ್ತೆಯಾಗಿದೆ. 

    “ಗ್ರಾಮದಲ್ಲಿ ಭಯೋತ್ಪಾದಕರ ಬಗ್ಗೆ ಎಚ್ಚರಿಕೆ ನೀಡಿದ್ದರಿಂದ ಒಂದು ದುರಂತವನ್ನು ತಪ್ಪಿಸಲಾಯಿತು. ಅನೇಕ ಮಕ್ಕಳು ಆಟವಾಡುತ್ತಿದ್ದರು ಮತ್ತು ಜನರು ಹೊರಗೆ ಹೋಗುತ್ತಿದ್ದರು. ಪರಿಸ್ಥಿತಿ ಹೀಗಿದ್ದಾಗ ಭಯೋತ್ಪಾದಕರು 15 ರಿಂದ 20 ಜನರನ್ನು ಸುಲಭವಾಗಿ ಕೊಲ್ಲಬಹುದಾಗಿತ್ತು. ಹೆಚ್ಚಾಗಿ ಮಕ್ಕಳು.

    ಜನರು ಸಂಜೆ ಸತ್ಸಂಗಕ್ಕೆ ಹೋಗುತ್ತಿದ್ದರು. ಅದು ಅನಾಹುತವಾಗಬಹುದಿತ್ತು” ಎಂದು ಗ್ರಾಮಸ್ಥ ಮತ್ತು ಪ್ರತ್ಯಕ್ಷದರ್ಶಿ ಸುರಿಂದರ್ ಹೇಳಿದ್ದಾರೆ. ತನ್ನ ಮೋಟಾರುಬೈಕಿನಲ್ಲಿ ತನ್ನ ಕುಗ್ರಾಮಕ್ಕೆ ಹಿಂದಿರುಗುತ್ತಿದ್ದ ಸುರೀಂದರ್, ನೀರು ಕೇಳಿದ ಶಸ್ತ್ರಧಾರಿಗಳನ್ನು ಎದುರಿಸಿದ್ದರು. ಅವರ ವರ್ತನೆಯಿಂದ ಅನುಮಾನಗೊಂಡ ಅವರು ತಕ್ಷಣ ಗ್ರಾಮದ ಜನತೆಗೆ ಎಚ್ಚರಿಕೆ ನೀಡಿದ್ದಾರೆ.

    ಅದು ಸಂಜೆ 7:30 ರಿಂದ 7:45 ರ ಸಮಯ. ನಾನು ನನ್ನ ಬೈಕ್‌ನಲ್ಲಿ ಹೋಗುತ್ತಿದ್ದಾಗ ಗ್ರಾಮದಲ್ಲಿ ಇಬ್ಬರು ಶಸ್ತ್ರಸಜ್ಜಿತ ಯುವಕರ ಬಗ್ಗೆ ಒಂದು ಮಗು ನನಗೆ ಮಾಹಿತಿ ನೀಡಿತು. ಅವರು ಕಪ್ಪು ಬಟ್ಟೆಯಲ್ಲಿ ಎಕೆ ರೈಫಲ್‌ಗಳನ್ನು ಧರಿಸಿರುವುದನ್ನು ನಾನು ನೋಡಿದೆ, ಅವರು ತಮ್ಮ ಬಳಿಗೆ ನನ್ನನ್ನು ಕರೆದರು. ನಾನು ಭಯೋತ್ಪಾದಕರಿರಬಹುದು ಎಂದು ಶಂಕಿಸಿ ಗ್ರಾಮಸ್ಥರನ್ನು ಎಚ್ಚರಿಸಿದೆ. ಗ್ರಾಮಸ್ಥರು ಅಂಗಡಿಗಳನ್ನು ಮುಚ್ಚಿ ವಾಹನಗಳನ್ನು ನಿಲ್ಲಿಸಿದರು, ”ಎಂದು ಸುರೀಂದರ್ ವಿವರಿಸಿದ್ದಾರೆ.

    “ನನ್ನ ಎಚ್ಚರಿಕೆಯ ನಂತರ, ಭಯೋತ್ಪಾದಕರು ಗುಂಡು ಹಾರಿಸಲು ಪ್ರಾರಂಭಿಸಿದರು. ಅವರು ಹಲವಾರು ಸುತ್ತು ಗುಂಡು ಹಾರಿಸಿದರು, ಸ್ಥಳೀಯರೊಬ್ಬರಿಗೆ ಭುಜಕ್ಕೆ ಗಾಯವಾಯಿತು, ನಂತರ ಸ್ಫೋಟ ಸಂಭವಿಸಿತು” ಎಂದು ಅವರು ಘಟನಾವಳಿಗಳನ್ನು ನೆನಪಿಸಿಕೊಂಡಿದ್ದಾರೆ.

    ಸುರಿಂದರ್ ಕೂಡಲೇ ಜಿಲ್ಲಾ ಅಭಿವೃದ್ಧಿ ಸಮಿತಿ ಸದಸ್ಯರಿಗೆ ಮಾಹಿತಿ ನೀಡಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಆಗಮಿಸಿದ ಪೊಲೀಸರು ಒಬ್ಬ ಭಯೋತ್ಪಾದಕನನ್ನು ಕೊಂದರು, ಮತ್ತೊಬ್ಬ ಪರಾರಿಯಾಗಿದ್ದಾನೆ. “ಸಕಾಲಿಕ ಎಚ್ಚರಿಕೆಗಾಗಿ ದೇವರಿಗೆ ಧನ್ಯವಾದಗಳು” ಎಂದು ಸುರಿಂದರ್ ಹೇಳಿದ್ದಾರೆ.

   “ಅವರು ಹಗಲಿನಲ್ಲಿ ಬಂದಿದ್ದರೆ, ಪ್ರದೇಶ ಜನಸಂದಣಿಯಿಂದ ತುಂಬಿರುವಾಗ, ಅದು ತುಂಬಾ ಘೋರವಾಗಿರುತ್ತಿತ್ತು. ಮುಂಜಾನೆ 3 ಗಂಟೆಗೆ, ಅವರು ಮತ್ತೆ ಗುಂಡು ಹಾರಿಸಿ ಸಿಆರ್‌ಪಿಎಫ್ ಅಧಿಕಾರಿಯನ್ನು ಕೊಂದಿದ್ದಾರೆ ಎಂದು ಸುರೀಂದರ್ ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link