ತಿಮ್ಮಪ್ಪನ ಹುಂಡಿಗು ಆರ್ಥಿಕ ಹಿಂಜರಿತದ ಕೊಡಲಿ ಪೆಟ್ಟು..!

ತಿರುಮಲ:

     ಭಾರತದ ಆರ್ಥಿಕ ಹಿಂಜರಿತದಿಂದಾಗಿ ದೇಶದ ಆರ್ಥಿಕ ಬೆನ್ನೆಲುಬಾದ ಉದ್ಯಮ , ಸಾರಿಗೆ , ಸಗಟು ವ್ಯಾಪಾರ ಇನ್ನು ಮುಂತಾದ  ಕ್ಷೇತ್ರದಲ್ಲಿ ಇದರ ಹೊಡೆತ ಬಿದ್ದಿದೆ. ಇದರ ಪರಿಣಾಮ ಸದ್ಯ ದೇವರ ಮೇಲೂ ಪ್ರಭಾವ ಬೀರುತ್ತಿದೆ.

   ಕುಸಿದ ಆರ್ಥಿಕತೆಯ ಪ್ರಭಾವದಿಂದ ತಿರುಮಲ ತಿರುಪತಿ ದೇವಸ್ಥಾನದ ಹುಂಡಿಯ ಸಂಗ್ರಹಕ್ಕೂ ತಟ್ಟಿದೆ. ಮಂಗಳವಾರ ಕೊನೆಗೊಂಡ ತಿರುಪತಿ ತಿಮ್ಮಪ್ಪನ ಒಂಭತ್ತು ದಿನಗಳ ಬ್ರಹ್ಮೋತ್ಸವಕ್ಕೆ ಭಕ್ತರ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಾಗಿದ್ದರೂ ಶ್ರೀವಾರಿ ಹುಂಡಿ ಸಂಗ್ರಹ ತೀವ್ರವಾಗಿ ಇಳಿಕೆ ಕಂಡಿದೆ. ಒಂಭತ್ತು ದಿನಗಳ ಬ್ರಹ್ಮೋತ್ಸವದ ಸಂದರ್ಭದಲ್ಲಿ ಸುಮಾರು 7.074 ಲಕ್ಷ ಯಾತ್ರಿಕರು ತಿರುಮಲದ ಶ್ರೀವೇಂಕಟೇಶ್ವರನ ದರ್ಶನ ಪಡೆದಿದ್ದು .

   ಯಾತ್ರಿಕರ ಸಂಖ್ಯೆ ಹೆಚ್ಚಾಗಿದ್ದರೂ ಹುಂಡಿ ಸಂಗ್ರಹ ಕಡಿಮೆಯಾಗಿದೆ. ಕಳೆದ ವರ್ಷ ಹುಂಡಿ ಸಂಗ್ರಹ 20.52 ಕೋಟಿ ರೂ ಇದ್ದು ಈ ವರ್ಷ 20.40 ಕೋಟಿ ರೂ ಸಂಗ್ರಹವಾಗಿದೆ ಇದರ ವ್ಯತ್ಯಾಸ ಸುಮಾರು 12 ಲಕ್ಷದಷ್ಟಿದೆ ಎಂದು ಟಿಟಿಡಿ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link