ಸಾಲ ತೀರಿಸಲು ಜಾರಿ ನಿರ್ದೇಶನಾಲಯ ಅಡ್ಡಿ ಮಾಡಿತ್ತು: ವಿಜಯ್ ಮಲ್ಯ

ಮುಂಬೈ:

     9,000 ಕೋಟಿ ರೂಪಾಯಿ ಸಾಲ ಮರುಪಾವತಿ ಮಾಡಲಾಗದೇ ಸುಸ್ತಿದಾರರಾಗಿರುವ ಉದಿಯಮಿ ವಿಜಯ್ ಮಲ್ಯ ಈಗ ಜಾರಿ ನಿರ್ದೇಶನಾಲಯದ ವಿರುದ್ಧವೇ ಆರೋಪ ಮಾಡಿದ್ದಾರೆ.

     ಬ್ರಿಟನ್ ನಲ್ಲಿರುವ ವಿಜಯ್ ಮಲ್ಯ ಜಾರಿ ನಿರ್ದೇಶನಾಲಯದ ವಿರುದ್ಧ ಆರೋಪ ಮಾಡಿದ್ದು, ಸಾಲ ತೀರಿಸುವ ನನ್ನ ಪ್ರಯತ್ನಗಳನ್ನು ಪ್ರತಿರೋಧಿಸಿದ್ದು ಜಾರಿ ನಿರ್ದೇಶನಾಲಯವೇ ಎಂದು ಹೇಳಿದ್ದಾರೆ.  ಮುಂಬೈ ಕೋರ್ಟ್ ಗೆ ವಿಜಯ್ ಮಲ್ಯ ತಮ್ಮ ವಕೀಲರ ಮೂಲಕ ಈ ಹೇಳಿಕೆ ನೀಡಿದ್ದಾರೆ. 

     ಕಳೇದ 2-3 ವರ್ಷಗಳಿಂದ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳ ಸಾಲ ಮರುಪಾವತಿ ಮಾಡುವುದಕ್ಕೆ ಯತ್ನಿಸುತ್ತಿದ್ದೇನೆ, ಆದರೆ ನನ್ನ ಪ್ರಯತ್ನಕ್ಕೆ, ಸಾಲ ತೀರಿಸುವ ಪ್ರಕ್ರಿಯೆಗೆ ನೆರವು ನೀಡುವುದರ ಬದಲು ಜಾರಿ ನಿರ್ದೇಶನಾಲಯ  ನನ್ನ ಪ್ರಯತ್ನಗಳಿಗೆಲ್ಲಾ ಜಾರಿನಿರ್ದೇಶನಾಲಯ ಪ್ರತಿರೋಧಿಸಿತ್ತು ಎಂದು ವಿಜಯ್ ಮಲ್ಯ ಆರೋಪ ಮಾಡಿದ್ದಾರೆ.

     ಜಾರಿ ನಿರ್ದೇಶನಾಲಯ ತಮ್ಮನ್ನು ದೇಶಭ್ರಷ್ಟ ಎಂದು ಘೋಷಿಸಿರುವುದಕ್ಕೂ ವಿಜಯ್ ಮಲ್ಯ ಆಕ್ಷೇಪ ವ್ಯಕ್ತಪಡಿಸಿದ್ದು, ಸಾಲ ಮರುಪಾವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಅಧಿಕಾರಿಗಳಿಗೆ ಸಹಕರಿಸುತ್ತಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.

                  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ