ತ.ನಾಡು
ದೇಶದಲ್ಲಿ ಸದ್ಯ ಎಲ್ಲೆಡೆ ಕೊರೋನಾ ರುದ್ರ ತಾಂಡವವಾಡುತ್ತಿದ್ದು ತ.ನಾಡು ಇಡೀ ದಕ್ಷಿಣ ಭಾತರದಲ್ಲಿ ಅತಿ ಸೋಂಕಿತ ರಾಜ್ಯವಾಗಿದೆ, ಇದನ್ನು ತಡೆಯಲು ಸರ್ಕಾರಗಳು ಹರ ಸಾಹಸ ಪಡುತ್ತಿದ್ದರೆ ಮಾಜಿ ಎಐಡಿಎಂಕೆ ಶಾಸಕನೋರ್ವ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ಕರ್ತವ್ಯದಲ್ಲಿದ್ದ ಪೊಲೀಸ್ ಮೇಲೆ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.
ತಮಿಳುನಾಡಿನ ಸೇಲಂನಲ್ಲಿ ಟೋಲ್ ಗೇಟ್ ಬಳಿ ಕರ್ತವ್ಯದಲ್ಲಿದ್ದ ಪೋಲೀಸ್ ಅಧಿಕಾರಿ ವಿರುದ್ಧ ಮನ ಬಂದಂತೆ ಕೂಗಾಡಿದ ಎಐಎಡಿಎಂಕೆ ಮಾಜಿ ಶಾಸಕ, ಡಿಎಂಕೆ ಮಾಜಿ ಸಂಸದನೂ ಆಗಿರುವ ಅರ್ಜುನನ್, ಅವರ ಮೇಲೆ ಹಲ್ಲೆಯನ್ನೂ ಮಾಡಿದ್ದು ಕ್ಯಾಮರಾದಲ್ಲಿ ಸೆರೆಯಾಗಿದೆ.
ತಮಿಳುನಾಡಿನಲ್ಲಿ ಲಾಕ್ಡೌನ್ ಇರುವುದರಿಂದ ಹೊರಗೆ ಓಡಾಡುವವರಿಗೆ ಇ ಪಾಸ್ ಕಡ್ಡಾಯವಾಗಿದೆ. ಸೇಲಂ ಬಳಿ ಶಾಸಕ ಅರ್ಜುನನ್ ಕಾರನ್ನು ತಡೆದ ಪೊಲೀಸರು ಇ ಪಾಸ್ ತೋರಿಸುವಂತೆ ಕೇಳಿದ್ದಾರೆ. ಆದರೆ ಮಾಜಿ ಶಾಸಕ ಸಂಯಮ ಕಳೆದುಕೊಂಡು ಪೊಲೀಸರ ವಿರುದ್ಧ ಕೂಗಾಡಲು ಆರಂಭಿಸಿದ್ದಾರೆ. ಬಳಿಕ ಕಾರಿನಿಂದ ಇಳಿದು ಬಂದು ಅಲ್ಲಿದ್ದ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ಮಾಡಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ