ಅಮರವತಿ:
ಆಂಧ್ರ ಪ್ರದೇಶದ ಮಾಜಿ ಸ್ಪೀಕರ್ ಅವರು ತಾವು ಅಧಿಕಾರದಲ್ಲಿದಾಗ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಅಕ್ರಮವಾಗಿ ಸರ್ಕಾರಿ ಕಛೇರಿಯ ಪೀಠೋಪಕರಣಗಳನ್ನು ತಮಗೆ ಸೇರಿದ ದ್ವಿಚಕ್ರ ವಾಹನ ಶೋ ರೂಂಗೆ ರವಾನಿಸಿದ್ದಾರೆ ಎಂದು ಆರೋಪಿಸಲಾಗಿದ್ದು ತನಿಖೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೂತನ ಆಂಧ್ರಪ್ರದೇಶದ ವಿಧಾನಸಭೆ ಅಧಿಕಾರಿಗಳು ನಿನ್ನೆ ಕೋಡೆಲಾ ಶಿವ ಪ್ರಸಾದ್ ರಾವ್ ಅವರಿಗೆ ಸೇರಿದ ಶೋ ರೂಂನಲ್ಲಿ ಶೋಧ ನಡೆಸಿ ಹಲವು ಐಷಾರಾಮಿ ಪೀಠೋಪಕರಣಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ .
ಕೊಡೆಲಾ ಅವರು ಅಧಿಕಾರದಲ್ಲಿದಾಗ ಹಲವು ಪೀಠೋಪಕರಣಗಳನ್ನು ಗುಂಟೂರಿನಲ್ಲಿರುವ ತಮಮ್ಮ ಶೋ ರೂಂ ಒಂದಕ್ಕೆ ಸ್ಥಳಾಂತರಿಸಿದ್ದರು ಎಂದಬ ಮಾಹಿತಿ ಬಂದ ತಕ್ಷಣ ಕಾರ್ಯ ಪ್ರವೃತ್ತರಾದ ಅಧಿಕಾರಿಗಳು ಶೋರೂಂ ಮೇಲೆ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ , ಆದರೆ ತಪಾಸಣೆಗೆ ಬಂದ ಅಧಿಕಾರಿಗಳನ್ನು ಸಿಬ್ಬಂದಿ ತಡೆದಿದ್ದಾರೆ ಎಂದು ತಿಳಿದು ಬಂದಿದೆ ಅವರ ಬಳಿ ಮಾತನಾಡುವ ವೇಳೆಗೆ ರಾವ್ ಪರ ವಕೀಲರೂ ಅಲ್ಲಿಗೆ ಧಾವಿಸಿ ಶೋಧಕ್ಕೆ ಅನುವು ಮಾಡಿ ಕೊಡುವಂತೆ ಸಿಬ್ಬಂದಿಗೆ ತಿಳಿಸಿದ್ದಾರೆ.
ಅಧಿಕಾರಿಗಳು ಶೋರೂಂನಿಂದ ಸುಮಾರು 32 ಕುರ್ಚಿಗಳು, ನಾಲ್ಕು ಸೋಫಾಗಳು, ಮೂರು ಟೇಬಲ್‌ಗಳು, ಒಂದು ಟೀಪಾಯ್ ಮತ್ತು ಇತರ ವಸ್ತುಗಳನ್ನು ಗುರುತಿಸಿದ್ದಾರೆ ಎಂದು ವರದಿಯಾಗಿದೆ.ಗುಂಟೂರು ಜಿಲ್ಲೆಯ ಸತ್ತೇನಪಲ್ಲಿಯಲ್ಲಿರುವ ರಾವ್ ಅವರ ನಿವಾಸದಲ್ಲೂ ಪೀಠೋಪಕರಣಗಳು ಮತ್ತು ಉಪಕರಣಗಳನ್ನು ಹುಡುಕುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ