ಶಿಮ್ಲಾ: 
ದಕ್ಷಿಣದಲ್ಲಿ ವರುಣ ತನ್ನ ರೌದ್ರಾವತಾರ ತೋರಿ ಮಾಡಿದ ಹಾನಿಯನ್ನು ಉತ್ತರಕ್ಕೂ ವಿಸ್ತರಿಸಿದ್ದಾನೆ ಹಿಮಾಚಲ ಪ್ರದೇಶದಲ್ಲಿ ತನ್ನ ರೌದ್ರಾವತಾರ ಮುಂದುವರೆಸಿದ್ದಾನೆ .ಸುರಿಯುತ್ತಿರುವ ಭಾರಿ ಮಳೆಗೆ ಇಲ್ಲಿನ ಪ್ರಸಿದ್ಧ ಪ್ರವಾಸಿ ತಾಣ ಮನಾಲಿ ಅಕ್ಷರಶಃ ತತ್ತರಿಸಿ ಹೋಗಿದೆ.
ಇಲ್ಲಿ ಭಾರಿ ಮಳೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿಯೇ 127.4 ಮಿ.ಮೀ. ಮಳೆಯಾಗಿದೆ ಎಂದು ಮೂಲಗಲು ತಿಳಿಸಿವೆ. ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಮನಾಲಿ ರಸ್ತೆಗಳೆಲ್ಲಾ ಸಂಪೂರ್ಣ ಜಲಾವೃತಗೊಂಡಿದೆ. ಅಲ್ಲದೆ ಭಾರಿ ಮಳೆಗೆ ಭೂಕುಸಿತ ಉಂಟಾಗಿದ್ದು, ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇಲ್ಲಿನ ಬಿಯಾಸ್ ನದಿ ತುಂಬಿ ಹರಿಯುತ್ತಿದ್ದು, ದಡದಲ್ಲಿ ನಿಂತಿದ್ದ ಬಸ್ ಒಂದು ನೀರಿನಲ್ಲಿ ಕೊಚ್ಚಿ ಹೋಗಿದೆ. ಈ ದೃಶ್ಯ ಕ್ಯಾಮರಾಗಳಲ್ಲಿ ಚಿತ್ರೀಕರಿಸಲಾಗಿದೆ.
#WATCH: Vacant bus gets washed away into the flooded Beas river in Manali. #HimachalPradesh pic.twitter.com/GMV2nqR2jX
— ANI (@ANI) September 23, 2018
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








