ನವದೆಹಲಿ
ಸಾಲಮನ್ನಾ ಯೋಜನೆಗೆ ಮಾಹಿತಿ ಒದಗಿಸಲು ಕಾಲಮಿತಿ ನಿಗದಿ ಮಾಡಿಲ್ಲ. ರೈತರು ಆತಂಕಪಡಬೇಕಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಲ ಮನ್ನಾ ಸೌಲಭ್ಯ ಪಡೆಯಲು ಅರ್ಜಿಗಳನ್ನು ವಿತರಿಸಲಾಗುತ್ತಿದೆ ಅಷ್ಟೇ. ಕಾಲಹರಣ ಮಾಡದೆ ರೈತರು ಸರಿಯಾದ ಮಾಹಿತಿಯನ್ನು ನಾಡ ಕಚೇರಿಗೆ ನೀಡಬೇಕು ಎಂದರು. ರೈತರ ಖಾತೆಗೆ ನೇರವಾಗಿ ಸೌಲಭ್ಯ ಲಭ್ಯವಾಗಬೇಕು. ಯಾವುದೇ ದಲ್ಲಾಳಿಗಳಿಗೆ ಇದರಿಂದ ಲಾಭ ಆಗಬಾರದು ಎಂಬುದೇ ನಮ್ಮ ಉದ್ದೇಶ. ಸಾಲ ಮನ್ನಾ ಮಾಹಿತಿ ಒದಗಿಸಲು ಸಮಯ ನಿಗದಿ ಮಾಡಿಲ್ಲ.
ಸುಳ್ಳು ಸುದ್ದಿಗೆ ಕಿವಿಕೊಡಬೇಡಿ. ರೈತರು ಖಾಸಗಿ ಸಾಲ ಪಡೆದು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು. ಸರ್ಕಾರ ದೊಡ್ಡ ಪ್ರಮಾಣದ ಯೋಜನೆಗಳನ್ನು ಜಾರಿ ತಂದಿದೆ. ಆತ್ಮಹತ್ಯೆ ಮಾಡಿಕೊಂಡು ತಮ್ಮ ಕುಟುಂಬಗಳನ್ನು ಬೀದಿಪಾಲು ಮಾಡಬೇಡಿ ಎಂದು ಕುಮಾರಸ್ವಾಮಿ ಮನವಿ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








