ಎಸ್‌ಎಂಬಿ ವಹಿವಾಟು ವೃದ್ಧಿಗೆ ಫೇಸ್‌ಬುಕ್ ಮತ್ತು ವಿಸಿ ಫಂಡ್‌ಗಳು ಸಹಭಾಗಿತ್ವ

ನವದೆಹಲಿ

     ಸಾಮಾಜಿಕ ಜಾಲತಾಣ ಫೇಸ್‌ಬುಕ್ ಇಂಡಿಯಾ, ದೇಶದ ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಸ್‌ಎಂಬಿ) ಬೆಳವಣಿಗೆಯನ್ನು ವೇಗಗೊಳಿಸಲು ವೆಂಚರ್ ಕ್ಯಾಪಿಟಲ್ (ವಿಸಿ)ಫಂಡ್ಸ್‌ನೊಂದಿಗೆ ಬುಧವಾರ ಸಹಭಾಗಿತ್ವ ಘೋಷಿಸಿದೆ.

       ವಿಸಿ ಬ್ರಾಂಡ್ ವೃದ್ಧಿ ಕಾರ್ಯಕ್ರಮದಡಿಯಲ್ಲಿ ಫೇಸ್‌ಬುಕ್‌ನ ಸರಣಿ ಮೊದಲನೆಯದಾಗಿದ್ದು, ಭಾರತದಲ್ಲಿ ಎಸ್‌ಎಂಬಿ ಬೆಳವಣಿಗೆಗೆ ಬಲವಾದ ಅಡಿಪಾಯವನ್ನು ಹಾಕಲಿದೆ. ಸಾಮಾಜಿಕ-ಆರ್ಥಿಕ ಬೆಳವಣಿಗೆಯನ್ನು ತ್ವರಿತಗೊಳಿಸಲು ಅನುವು ಮಾಡಿಕೊಡುತ್ತದೆ ಎಂದು ಕಂಪನಿ ತಿಳಿಸಿದೆ.

        ಈ ಕಾರ್ಯಕ್ರಮದ ಭಾಗವಾಗಿ ಫೇಸ್‌ಬುಕ್, ವಿಸಿ ಫಂಡ್‌ ನೊಂದಿಗೆ ಬ್ರ್ಯಾಂಡ್‌ ವೃದ್ಧಿಗಾಗಿ ಕೆಲಸ ಮಾಡುತ್ತದೆ. ಮೊದಲ ಆವೃತ್ತಿಯಲ್ಲಿ, ಫೇಸ್‌ಬುಕ್ ಮುಂಬೈ ಮೂಲದ ಸಾಸ್.ವಿ.ಸಿ ಯೊಂದಿಗೆ ಕೆಲಸ ಮಾಡಲಿದೆ. ಆಹಾರ ಮತ್ತು ಪಾನೀಯಗಳು, ವೈಯಕ್ತಿಕ ಆರೈಕೆ, ಉಡುಪು ಮತ್ತು ಜೀವನಶೈಲಿಯ ಕ್ಷೇತ್ರದಲ್ಲಿನ ಸ್ಟಾರ್ಟ್ಅಪ್‌ಗಳೊಂದಿಗೆ ಸಹಭಾಗಿತ್ವ ಇದಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link