ಕೋಲ್ಕತ್ತಾ:
ಇಂದಿರಾ ಗಾಂಧಿ(ಪ್ರಿಯದರ್ಶಿನಿ) ಕುಟುಂಬದ ಹೊಸ ತಲೆಮಾರಿನ ಕುಡಿಯಾದ ಪ್ರಿಯಾಂಕಾ ಗಾಂಧಿ(ವಾದ್ರಾ) ಅವರು ಸಕ್ರಿಯ ರಾಜಕಾರಣಕ್ಕೆ ಸೇರ್ಪಡೆಯಾಗಿದನ್ನು ಕಂಡು ಬಿಜೆಪಿಯ ಅಧ್ಯಕ್ಷ ಅಮಿತ್ ಶಾ ಅವರು ಕಾಂಗ್ರೇಸ್ ನಲ್ಲಿ ಈಗಿರುವ 2-ಜಿ ಹಗರಣ ಗ್ಯಾಂಗಿಗೆ ಮತ್ತೊಂದು ಜಿ ಸೇರ್ಪಡೆಯಾಗಿದೆ ‘ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ .
ಮೇದಿನೀಪುರ ಜಿಲ್ಲೆಯ ಪುರ್ಬಾದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಶಾ, ಪ್ರಿಯಾಂಕಾ ಗಾಂಧಿಯ ಹೆಸರಿನಲ್ಲಿ ಗಾಂಧಿಯ ಮೊದಲು ಇರುವ ಜಿ ಅಕ್ಷರವನ್ನು ಹಿಡಿದು ಮೂದಲಿಸಿದರು. ಯುಪಿಎ ಅಧಿಕಾರಾವಧಿಯಲ್ಲಿ 12 ಲಕ್ಷ ಕೋಟಿ ರೂಪಾಯಿಗಳ 2ಜಿ ಹಗರಣ ನಡೆದಿದೆ. ಅದಕ್ಕೆ ಇದೀಗ ಮತ್ತೊಂದು ಜಿ ಸೇರ್ಪಡೆಯಾಗಿದೆ. ಅವರ ಹೆಸರು ಪ್ರಿಯಾಂಕಾ ಗಾಂಧಿ. ಅವರು ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ಯಾವ ಮಟ್ಟದಲ್ಲಿ ಇರಬಹುದು ಎಂದು ಊಹಿಸಿ ಎಂದು ನೆರೆದಿದ್ದ ಜನಸಮೂಹದ ಮುಂದೆ ಹೇಳಿದರು ಎಂದು ವರದಿಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ