98,202 ಕೋಟಿ ರೂಗಳಿಗೆ ಕುಸಿದ ಜಿ ಎಸ್ ಟಿ ಸಂಗ್ರಹ..!

ನವದೆಹಲಿ:

     ಸದ್ಯ ದೇಶದಲ್ಲಿ ಆಗುತ್ತಿರುವ ಆರ್ಥಿಕ ಬೆಳವಣಿಗೆ ಕುಂಟಿತದಿಂದಾಗಿ ಆಗಸ್ಟ್ ತಿಂಗಳಿನಲ್ಲಿ ಜಿಎಸ್‍ಟಿ ಸಂಗ್ರಹವು 98,202 ಕೋಟಿ ರೂಗಳಿಗೆ ಕುಸಿತ ಕಂಡಿದೆ ಎಂದು ತಿಳಿದು ಬಂದಿದೆ .

      ಕಳೆದ ಜೂನ್ ನಲ್ಲಿ 99,939 ಕೋಟಿ ರುಪಾಯಿ ಸಂಗ್ರಹವಾಗಿತ್ತು. ಜುಲೈನಲ್ಲಿ 1.2 ಲಕ್ಷ ಕೋಟಿ ರುಪಾಯಿ ಸಂಗ್ರಹವಾಗಿತ್ತು. ಜುಲೈಗೆ ಹೋಲಿಸಿಕೊಂಡರೆ ಜಿಎಸ್‍ಟಿ ಸಂಗ್ರಹದಲ್ಲಿ ಭಾರಿ ಇಳಿಕೆ ಕಂಡು ಬಂದಿದೆ.ಇನ್ನು 2018ರ ಆಗಸ್ಟ್ ನಲ್ಲಿ 93,960 ಕೋಟಿ ರುಪಾಯಿ ಸಂಗ್ರಹವಾಗಿತ್ತು. 2019ರ ಆಗಸ್ಟ್ ನಲ್ಲಿ 98,202 ಕೋಟಿ ರುಪಾಯಿ ಸಂಗ್ರಹವಾಗಿದ್ದು ಶೇಕಡ 4.5ರಷ್ಟು ಏರಿಕೆಯಾಗಿದೆ.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap