ನವದೆಹಲಿ:
ದೇಶದ ಜಿಎಸ್‌ಟಿ ಸಂಗ್ರಹಣೆಯೂ 19 ತಿಂಗಳಲ್ಲಿಯೇ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ ಕಳೆದ ಸೆಪ್ಟೆಂಬರ್‌ನಲ್ಲಿ 91,916 ಕೋಟಿ ರೂಗಳಿಗೆ ಬಂದು ತಲುಪಿದೆ, ಇಂದು ಬಿಡುಗಡೆಯಾಗಿರುವ ಸರ್ಕಾರದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿನ ಈ ಆರ್ಥಿಕ ಕುಸಿತವು ದೇಶದ ಆರ್ಥಿಕ ಪ್ರಗತಿ ಕುಂಟಿತವಾಗುವ ಅಪಾಯವನ್ನು ಹೆಚ್ಚಿಸುತ್ತಿದೆ. ಹಿಂದಿನ ತಿಂಗಳುಗಳಲ್ಲಿ ಸಂಗ್ರಹ ನೋಡಿದರೆ 98,202 ಕೋಟಿ ರೂ ಇತ್ತು. ಒಂದು ವರ್ಷದ ಹಿಂದೆ ಇದೇ ತಿಂಗಳಲ್ಲಿ ಆದಾಯ ಸಂಗ್ರಹದಿಂದ ಶೇ 2.67 ರಷ್ಟು ಕುಸಿತ ಕಂಡು ರೂ. 94,442 ಕೋಟಿ ಇತ್ತು.
2019 ರ ಸೆಪ್ಟೆಂಬರ್ ತಿಂಗಳಲ್ಲಿ ಸಂಗ್ರಹಿಸಲಾದ ಒಟ್ಟು ಜಿ ಎಸ್ ಟಿ ಆದಾಯ 91,916 ಕೋಟಿ ರೂ ಇದೆ ಇದರಲ್ಲಿ ಸಿಜಿಎಸ್ಟಿ 16,630 ಕೋಟಿ ರೂ., ಎಸ್ ಜಿ ಎಸ್ ಟಿ 22,598 ಕೋಟಿ ರೂ., ಐ ಜಿ ಎಸ್ ಟಿ 45,069 ಕೋಟಿ ರೂ. (ಆಮದಿನ ಮೇಲೆ ಸಂಗ್ರಹಿಸಿದ 22,097 ಕೋಟಿ ರೂಪಾಯಿ ಸೇರಿದೆ) ಮತ್ತು ಸೆಸ್ 7,620 ಕೋಟಿ ರೂ. (ಆಮದಿನ ಮೇಲೆ ಸಂಗ್ರಹಿಸಿದ 728 ಕೋಟಿ ರೂ. ಸೇರಿದೆ) ”ಎಂದು ಹಣಕಾಸು ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಸೆಪ್ಟೆಂಬರ್ 30 ರವರೆಗೆ ಸಲ್ಲಿಸಲಾದ ಒಟ್ಟು ಜಿ ಎಸ್ ಟಿ ಆರ್ 3 ಬಿ ರಿಟರ್ನ್ಸ್ (ಸ್ವಯಂ ಮೌಲ್ಯಮಾಪನ ರಿಟರ್ನ್‌ನ ಸಾರಾಂಶ) 75.94 ಲಕ್ಷ ಎಂದು ತಿಳಿಸಿದೆ.
ಸರ್ಕಾರ ರೂ. 21,131 ಕೋಟಿ ಮತ್ತು15121 ಕೋಟಿಗಳನ್ನು ಸಿಜಿಎಸ್‌ಟಿ, ಐಜಿಎಸ್‌ಟಿ ಮತ್ತು ಎಸ್‌ಜಿಎಸ್‌ಟಿ ಪಾವತಿದಾರರಿಗೆ ಹಿಂತಿರುಗಿದೆ ಎಂದು ಸಚಿವಾಲಯ ತಿಳಿಸಿದೆ.
ಸರ್ಕಾರ ಸೆಪ್ಟೆಂಬರ್‌ನಲ್ಲಿ ರೂ. 37,761 ಕೋಟಿಯನ್ನು ಸಿಜಿಎಸ್‌ಟಿಯಯಿಂದಲ್ಲೂ ಮತ್ತು37,719 ಕೋಟಿಗಳನ್ನು ರೂಗಳನ್ನು ಎಸ್‌ಜಿಎಸ್‌ಟಿಯಿಂದಲ್ಲೂ ಕೇಂದ್ರ ಹಾಗು ರಾಜ್ಯ ಸರ್ಕಾರಗಳಲ್ಲಿ ಕ್ರಮವಾಗಿ ಉಳಿಕೆಯಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ