ಜಮ್ಮು-ಕಾಶ್ಮೀರ : ಕುಟುಂಬದವರ ಬಗ್ಗೆ ಮಾಹಿತಿಗಾಗಿ ಸಹಾಯವಾಣಿ ಬಿಡುಗಡೆ..!!

ಶ್ರೀನಗರ

       ಶ್ರೀನಗರದ ಜಿಲ್ಲಾಧಿಕಾರಿ ಶಾಹಿದ್ ಚೌಧರಿ ಕಾಶ್ಮೀರದಲ್ಲಿ ವಾಸಿಸುತ್ತಿರುವ ತಮ್ಮ ಕುಟುಂಬದ ಸ್ಥಿತಿಗತಿ ತಿಳಿಯಲು ಬೇರೆಡೆಗಳಲ್ಲಿ ಇರುವ ಕಾಶ್ಮೀರಿಗಳಿಗೆ ಜಿಲ್ಲಾಧಿಕಾರಿಗಳು ಸಹಾಯ ವಾಣಿ ಬಿಡುಗಡೆ ಮಾಡಿದ್ದಾರೆ. ಸಂಖ್ಯೆಗಳು ಈ ರೀತಿ ಇವೆ 9419028242 ಮತ್ತು 9419028251 ಕರೆ ಮಾಡುವ ಮುಲಕ ನಿಮ್ಮ ಕುಟುಂಬದ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.

     

ಕಾಶ್ಮೀರದಲ್ಲಿ ಸಾರಿಗೆ ವ್ಯವಸ್ಥೆಯೂ ಸುಗಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದ ಅವರು ಕಾಶ್ಮೀರದಿಂದ          ಹೊರಗಡೆ ತಮ್ಮ ಕುಟುಂಬಗಳನ್ನು ಬಿಟ್ಟು ಇಲ್ಲಿ ವಾಸಿಸುವ ಕಾರ್ಮಿಕರು ತಮ್ಮ ಕುಟುಂಬಗಳನ್ನು ನೋಡ ಬಯಸಿದರೆ ಅಂತಹವರಿಗೆ ನಾವು ಪ್ರಯಾಣಿಸಲು ಸುಸಜ್ಜಿತವಾದ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು.

    ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ಸುಗಳ ವ್ಯವಸ್ಥೆ ಮಾಡಲಾಗಿದ್ದು ಈಗಾಗಲೆ 1940 ಪ್ರಯಾಣಿಕರನ್ನು ಹೊತ್ತ 56 ಬಸ್‌ಗಳು ನಿನ್ನೆಯೇ ಇಲ್ಲಿಂದ ರವಾನೆಯಾಗಿವೆ ಎಂದು ತಿಳಿಸಿದರು. ಇಂದು ಇನ್ನು ಕೆಲವರನ್ನು ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ ”, ಎಂದು ಅವರು ತಿಳಿಸಿದ್ದಾರೆ.

   ಕಾಶ್ಮೀರದಲ್ಲಿ ಸದ್ಯ ಲ್ಯಾಂಡ್‌ಲೈನ್‌ ಮತ್ತು ಇಂಟರ್‌ನೆಟ್ ಸೇವೆ ಸೇರಿದಂತೆ ಎಲ್ಲಾ ರೀತಿಯ ವೈಯಕ್ತಿಕ ಸಂವಹನ ಮಾರ್ಗಗಳನ್ನು ಕಡಿತಗೊಳಿಸಲಾಗಿದ್ದು, ಕರ್ಫ್ಯೂ ಮತ್ತು ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಆದ್ದರಿಂದ ನಿಮ್ಮ ಕುಟುಂಬದ ಮಾಹಿತಿ ಬೇಕಾದಲ್ಲಿ ಮೇಲೆ ತಿಳಿಸಿರುವ ಸಂಖ್ಯೆಗೆ ಸಂಪರ್ಕಿಸಬೇಕಾಗಿ ಕೋರುತ್ತೇವೆ  ಎಂದು ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link