ಅಯೋಧ್ಯೆ:
ಧಾರ್ಮಿಕ ಖ್ಯಾತ ಮತ್ತು ಸೂಕ್ಷ್ಮ ಪ್ರದೇಶವಾಗಿರುವ ರಾಮ ಜನ್ಮಭೂಮಿಯಲ್ಲಿ ನೆಲಸಮ ಮಾಡುವಾಗ ಮರಳುಗಲ್ಲಿನ ಕೆತ್ತನೆಗಳು ಮತ್ತು ಶಿವಲಿಂಗ ಸಿಕ್ಕಿದೆ ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ.
ಕಳೆದ 10 ದಿನಗಳಿಂದ ರಾಮ ಜನ್ಮಭೂಮಿಯಲ್ಲಿ ನೆಲಸಮ ಕೆಲಸ ನಡೆಯುತ್ತಿದೆ. ಮಣ್ಣು-ಕಲ್ಲುಗಳಡಿ ಹಲವು ಅವಶೇಷಗಳು ಸಿಕ್ಕಿವೆ. ನಿರ್ಮಾಣದ ಸ್ತಂಭಗಳು , ಶಿವಲಿಂಗ,ಮರಳುಗಲ್ಲಿನ ಕೆತ್ತನೆಗಳು ಅವಶೇಷಗಳಡಿಯಲ್ಲಿ ಸಿಕ್ಕಿವೆ. ಕುಬೇರ ತೀಲದಲ್ಲಿರುವಂತಹ ಲಿಂಗದಂತೆ ಶಿವಲಿಂಗ ಸಿಕ್ಕಿದೆ ಎಂದು ಚಂಪತ್ ರೈ ಹೇಳಿದ್ದಾರೆ.
ಜಿಲ್ಲಾಡಳಿತದಿಂದ ಅನುಮತಿ ಸಿಕ್ಕಿದ ನಂತರ ರಾಮ ಜನ್ಮಭೂಮಿಯಲ್ಲಿ ನೆಲಸಮ ಮಾಡುವ ಕಾರ್ಯ ನಡೆಯುತ್ತಿದೆ. ರಾಮ ದೇವಸ್ಥಾನ ನಿರ್ಮಾಣ ಮುಗಿಯುವವರೆಗೆ ತಾತ್ಕಾಲಿಕವಾಗಿ ರಾಮ ಜನ್ಮಭೂಮಿಯಲ್ಲಿರುವ ಮಾನಸ್ ಭವನ್ ಹತ್ತಿರ ತಾತ್ಕಾಲಿಕ ಕಟ್ಟಡಕ್ಕೆ ರಾಮ್ ಲಲ್ಲಾ ಮೂರ್ತಿಯನ್ನು ಕಳೆದ ಮಾರ್ಚ್ ನಲ್ಲಿ ವರ್ಗಾಯಿಸಲಾಗಿತ್ತು.
ಐತಿಹಾಸಿಕ ತೀರ್ಪೊಂದರಲ್ಲಿ ಕಳೆದ ವರ್ಷ ನವೆಂಬರ್ 9ರಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿ ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಿ ಅದಕ್ಕೆ ಸಂಬಂಧಪಟ್ಟಂತೆ ಟ್ರಸ್ಟ್ ನಿರ್ಮಿಸುವಂತೆ ಕೂಡ ಹೇಳಿತ್ತು. ಅದಕ್ಕೆ ಪ್ರತಿಯಾಗಿ 5 ಎಕರೆ ಭೂಮಿಯನ್ನು ಸರಿಯಾದ ಕಡೆಯಲ್ಲಿ ಸುನ್ನಿ ವಕ್ಫ್ ಬೋರ್ಡ್ ಗೆ ನೀಡುವಂತೆ ಕೂಡ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತ್ತು.