ಚೆನ್ನೈ:
ದೇಶ ಕಂಡ ಅತ್ಯಂತ ವಿರಳಾತಿ ವಿರಳ ಬಹುಮುಖ ಪ್ರತಿಭೆ ಕಮಲ್ ಹಾಸನ್ ಅವರು ಸ್ಥಾಪಿಸಿದ ರಾಜಕೀಯ ಪಕ್ಷ ಮಕ್ಕಳ್ ನೀದಿ ಮೈಯಂ ಪಕ್ಷವನ್ನು ಕಾಂಗ್ರೆಸ್ ನೇತೃತ್ವದ ಡಿಎಂಕೆ ಜೊತೆ ವಿಲೀನವಾಗಲಿದೆ ಎಂಬ ಊಹೆಗಳು ಹುಟ್ಟಿಕೊಂಡಿವೆ.
ಚೆನ್ನೈನಲ್ಲಿ ಇಂದು ನಡೆಯಲಿರುವ ಡಿಎಂಕೆ ಮಾಜಿ ನಾಯಕ ಕರುಣಾನಿಧಿ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ವಿಲೀನಕ್ಕೆ ಸಹಿ ಹಾಕಲಿದ್ದಾರೆ ಎಂಬ ಊಹಾಪೋಹ ಎದ್ದಿದ್ದವು ಅವುಗಳಿಗೆ ಇಂದು ತೆರೆಬಿದ್ದಿದ್ದು ನಾವು ಒಂಟಿ ಹೋರಾಟ ಮಾಡುವುದಾಗಿ ಕಮಲ್ ಹೇಳಿದ್ದಾರೆ ನಾನು ಯಾರ ಕೈಯನ್ನು ಹಿಡಿಯುವುದಿಲ್ಲ ಮತ್ತು ನಾನು ಜನಿಗೋಸ್ಕರ ಪಕ್ಷ ಕಟ್ಟಿರುವುದು ಸ್ವಂತಕ್ಕಲ್ಲ ಎಂದು ಹೇಳುವ ಮೂಲಕ ಇಂತಹ ವಿವಾದಕ್ಕೆಲ್ಲ ಸಿಲಿಕೊಳ್ಳಲು ಇಚ್ಚಿಸುವುದಿಲ್ಲ ಎಂದು ತಮ್ಮ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ