ಬಿಬಿಎಂಪಿ : ರಾಜಾಕಾಲುವೆ ಒತ್ತುವರಿ ಸಮೀಕ್ಷೆ : 1,134 ಹೊಸ ಒತ್ತುವರಿ ಪತ್ತೆ….!

ಬೆಂಗಳೂರು: 

    ಬಿಬಿಎಂಪಿ ಮುಖ್ಯ ಆಯುಕ್ತರ ನಿರ್ದೇಶನದ ಮೇರೆಗೆ  ವಲಯ ಎಂಜಿನಿಯರ್‌ಗಳು ಮತ್ತು ಸರ್ವೇಯರ್‌ಗಳನ್ನು ಕಾಲುವೆಗಳ ಸಮೀಕ್ಷೆ ನಡೆಸಲು ನಿಯೋಜಿಸಲಾಗಿದೆ. ರಾಜಕಾಲುವೆಗಳ ಒತ್ತುವರಿಯಿಂದಾಗಿ 2022 ರಲ್ಲಿ ನಗರದಲ್ಲಿ ಪ್ರವಾಹ ಉಂಟಾಗಿತ್ತು ಮತ್ತು ಕರ್ನಾಟಕ ಹೈಕೋರ್ಟ್ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎದು ಬಿಬಿಎಂಪಿ ಬೃಹತ್ ನೀರುಗಾಲುವೆ ವಿಭಾಗದ ಹಿರಿಯ ಎಂಜಿನಿಯರ್ ಒಬ್ಬರು ತಿಳಿಸಿದ್ದಾರೆ. 

   “ಈ ವರ್ಷದ ಆಗಸ್ಟ್ 27 ಮತ್ತು ಅಕ್ಟೋಬರ್ 20 ರ ನಡುವೆ 1,134 ಹೊಸ ಒತ್ತುವರಿ ಕಂಡುಬಂದಿವೆ. ಇವುಗಳನ್ನು ಪರಿಶೀಲಿಸಲು SWD ಇಲಾಖೆ ತಹಶೀಲ್ದಾರ್‌ಗಳನ್ನು ಕೇಳಿದೆ ಎಂದು ಎಂದು ಎಂಜಿನಿಯರ್ ಹೇಳಿದರು.

    ಅತಿಕ್ರಮಣದಾರರಿಗೆ ಕರ್ನಾಟಕ ಭೂಕಂದಾಯ ಕಾಯ್ದೆಯ ಕಲಂ 104ರ ಅಡಿಯಲ್ಲಿ ತಹಶೀಲ್ದಾರ್‌ಗಳಿಂದ ನೋಟಿಸ್ ಪಡೆದು ವಿಚಾರಣೆ ನಡೆಸಿ, ಕಂದಾಯ ಇಲಾಖೆಗೆ ಒತ್ತುವರಿ ಕುರಿತು ಮನವರಿಕೆ ಮಾಡಿಕೊಟ್ಟ ನಂತರ ತೆರವುಗೊಳಿಸುವ ಆದೇಶ ಹೊರಡಿಸಿ ಪಾಲಿಕೆ ಆದೇಶವನ್ನು ಜಾರಿಗೊಳಿಸಲಾಗುವುದು ಎಂದು ಬಿಬಿಎಂಪಿ ಹಿರಿಯ ಅಧಿಕಾರಿ ತಿಳಿಸಿದರು. ಬಿಬಿಎಂಪಿ ಅಧಿಕಾರಿಗಳ ದೂರುಗಳ ನಂತರ, ಗ್ರಾಮ ನಕ್ಷೆ ಆಧರಿಸಿ ತಹಶೀಲ್ದಾರ್‌ಗಳು ಸಮೀಕ್ಷೆ ನಡೆಸಲಿದ್ದಾರೆ ಎಂದು ಬೆಂಗಳೂರು ನಗರ ಉಪ ಆಯುಕ್ತ ಎನ್ ದಯಾನಂದ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

     ಬಿಬಿಎಂಪಿ ಪೂರ್ವ ವಲಯ 24,ಬಿಬಿಎಂಪಿ ಪಶ್ಚಿಮ ವಲಯ 74,ಬಿಬಿಎಂಪಿ ದಕ್ಷಿಣ ವಲಯ 51,ಯಲಹಂಕ  308,ಮಹದೇವಪುರ 75,ಬೊಮ್ಮನಹಳ್ಳಿ 175,ಆರ್ ಆರ್ ನಗರ 71,ದಾಸರಹಳ್ಳಿ 246,ಕೋರಮಂಗಲ ವ್ಯಾಪ್ತಿಯಲ್ಲಿ 110 ರಾಜಕಾಲುವೆ ಒತ್ತುವರಿ ಪತ್ತೆಯಾಗಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap