ನಾನೊಬ್ಬ ಕೌಲ ಬ್ರಾಹ್ಮಣ: ರಾಹುಲ್ ಗಾಂಧಿ

ಜೈಪುರ:
          ಇಷ್ಟು ದಿನ ಸುಮ್ಮನಿದ್ದ ರಾಹುಲ್ ಗಾಂಧಿಗೆ ಈಗ ತಮ್ಮ ಜಾತಿ ಯಾವುದು ಎಂದು ನೆನಪಿಗೆ ಬಂದಿರುವ ಹಾಗೆ ಕಾಣುತ್ತಿದೆ ತಾನೊಬ್ಬ ಕೌಲ ಬ್ರಾಹ್ಮಣ, ತನ್ನದು ದತ್ತಾತ್ರೆಯ ಗೋತ್ರ ಎಂದು ರಾಹುಲ್ ಗಾಂಧಿ ದೇವಸ್ಥಾನದಲ್ಲಿ ಅರ್ಚಕರಿಗೆ ಪೂಜೆ ಸಂದರ್ಭದಲ್ಲಿ ತಿಳಿಸಿದ್ದಾರೆ.
         ರಾಜಸ್ಥಾನದ ವಿಧಾನಸಭೆ ಚುನಾವಣೆ ಪ್ರಚಾರಕ್ಕಾಗಿ ರಾಜಸ್ಥಾನಕ್ಕೆ ಬಂದ ಅವರು ರಾಜಸ್ತಾನದಲ್ಲಿಯೂ ಟೆಂಪಲ್ ರನ್ ಮುಂದುವರೆಸಿಕೊಂಡಿರುವುದ್ದಲ್ಲದೇ ಬ್ರಹ್ಮನ ದೇವಾಲಯದಲ್ಲಿ ಅರ್ಚಕರ ಕೇಳಿದ್ದಕ್ಕೆ ತಮ್ಮ ನಿಜ ಜಾತಿ ಮತ್ತು ಗೋತ್ರವನ್ನು ಹೇಳಿದ್ದಾರೆ ಎಂದು ತಿಳಿದು ಬಂದಿದೆ ಇದೊಂದೇ ಅಲ್ಲದೇ ಬಿಜೆಪಿ ಪ್ರಚಾರ ಸಭೆಯಲ್ಲಿ ನಾಯಕರೊಬ್ಬರು ” ನಿಮಗೆ ನಿಮ್ಮ ಜಾತಿ ಗೋತ್ರ” ಯಾವುದೆಂದು ತಿಳಿದಿಲ್ಲ ಎಂದು ಹೇಳಿದಕ್ಕೆ ರಹುಲ್ ತಾವು ಕಾಶ್ಮೀರಿ ಬ್ರಾಹ್ಮಣ ಕುಲದವರಾಗಿದ್ದು ತಮ್ಮದು ದತಾತ್ರೇಯ ಗೋತ್ರ ಎಂದು ತಿರುಗೇಟು ನೀಡಿದ್ದಾರೆ . ಇಂದು  ವಿವಿಧ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಕಾಂಗ್ರೆಸ್ ಹಾಗೂ ಬಿಜೆಪಿ ಪರಸ್ಪರ ವಾಗ್ದಾಳಿ ನಡೆಸುತ್ತಿವೆ.

 

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap