ನವದೆಹಲಿ
ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ 10ನೇ ತರಗತಿ ಐಸಿಎಸ್‌ಇ ಹಾಗೂ ಐಎಸ್‌ಸಿ 12ನೇ ತರಗತಿ ಪರೀಕ್ಷೆ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದೆ.ಐಸಿಎಸ್‌ಇ 10ನೇ ತರಗತಿಯಲ್ಲಿ ಶೇ.99.34ರಷ್ಟು ಫಲಿತಾಂಶ ಬಂದಿದೆ. ಐಎಸ್‌ಸಿ ದ್ವಿತೀಯ ಪಿಯುಸಿಯಲ್ಲಿ ಶೇ.96.84ರಷ್ಟು ಫಲಿತಾಂಶ ಹೊರಬಿದ್ದಿದೆ.ಐಸಿಎಸ್‌ಇ ಪರೀಕ್ಷೆಯಲ್ಲಿ ಒಟ್ಟು 2.07 ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಅದರಲ್ಲಿ 2.06.525 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಐಸಿಎಸ್‌ಇ / ಐಎಸ್‌ಸಿ ಫಲಿತಾಂಶಗಳನ್ನು ನೋಡುವುದು ಹೇಗೆ? * CISCE, cice.org ಅಥವಾ examresults.net ವೆಬ್ಸೈಟ್ಗೆ ಭೇಟಿ ನೀಡಿ. * ಐಸಿಎಸ್ಇ ಅಥವಾ ಐಎಸ್ಸಿ ಕೋರ್ಸ್ ಆಯ್ಕೆ ಮಾಡಿಕೊಳ್ಳಿ, ಫಲಿತಾಂಶ 2020ರ ಮೇಲೆ ಕ್ಲಿಕ್ ಮಾಡಿ * ನಿಮ್ಮ ಪಠ್ಯಕ್ರಮ ವಿಷಯ ಆಯ್ಕೆ ಮಾಡಿಕೊಳ್ಳಿ, ಪ್ರವೇಶ ಸಂಖ್ಯೆ ಇತ್ಯಾದಿ ವಿವರ,ಯುಐಡಿ, ಸೂಚ್ಯಂಕ ಸಂಖ್ಯೆ ಮತ್ತು ಕ್ಯಾಪ್ಚಾ ನಮೂದಿಸಿ * ‘Submit’ ಕ್ಲಿಕ್ ಮಾಡಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
