ನವದೆಹಲಿ
ಇನ್ನೂ ಕೇವಲ 7 ವರ್ಷಗಳಲ್ಲಿ ಭಾರತವು ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರವಾಗಲಿದೆ.ವಿಶ್ವದ ಅತಿಹೆಚ್ಚು ಜನಸಂಖ್ಯೆವುಳ್ಳ ಚೀನಾವನ್ನು ಹಿಂದಿಕ್ಕಿ 2027ರ ವೇಳೆಗೆ ಭಾರತ ಅತಿಹೆಚ್ಚು ಜನಸಂಖ್ಯೆ ದೇಶವಾಗಿ ಹೊರಹೊಮ್ಮಲಿದೆ ಎಂದು ವಿಶ್ವಸಂಸ್ಥೆಯ ವರದಿಯು ತಿಳಿಸಿದೆ.
ವಿಶ್ವ ಜನಸಂಖ್ಯೆ 7.7 ಮಿಲಿಯನ್‍ನಷ್ಟಿದ್ದು, 2050ರ ವೇಳೆಗೆ 2 ಬಿಲಿಯನ್ ಜನಸಂಖ್ಯೆ ಹೆಚ್ಚಳದೊಂದಿಗೆ 9.7 ಬಿಲಿಯನ್ ತಲುಪಲಿದೆ ಭಾರತದ ಜನಸಂಖ್ಯೆ 2050ರ ವೇಳೆಗೆ 273 ಮಿಲಿಯನ್ ಹೆಚ್ಚಳವಾಗಲಿದೆ ನೈಜೀರಿಯಾ ಜನಸಂಖ್ಯೆ 200 ಮಿಲಿಯನ್ ಹೆಚ್ಚಳಗೊಳ್ಳಲಿದೆ. 2027ರ ವೇಳೆಗೆ ಜನಸಂಖ್ಯೆಯಲ್ಲಿ ಭಾರತ, ಚೀನಾವನ್ನು ಹಿಂದಿಕ್ಕಲಿದೆ.ವಿಶ್ವಸಂಸ್ಥೆಯ ವರದಿಯನ್ವಯ ವಿಶ್ವದ ಜನಸಂಖ್ಯೆ 2050ರ ವೇಳೆಗೆ 9.7 ಮಿಲಿಯನ್‍ಗೆ ತಲುಪಲಿದೆ.
ಜನಸಂಖ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣ ನೀಡಿರುವ ವಿಶ್ವಸಂಸ್ಥೆ ಮುಂದಿನ ಮೂರು ದಶಕಗಳಲ್ಲಿ ಅತಿಹೆಚ್ಚು ಯುವಜನತೆ ಸಂತಾನೋತ್ಪತ್ತಿ ವಯಸ್ಸಿಗೆ ಕಾಲಿಡುವುದೇ ಜನಸಂಖ್ಯೆಯ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ತಿಳಿಸಿದೆ.ಭಾರತದ ಒಟ್ಟು ಸಂತಾನ ಫಲವತ್ತತೆ ದರ 2.2 ಆಗಿದ್ದು, 24 ರಾಜ್ಯಗಳಲ್ಲಿ ಅರ್ಧದಷ್ಟು ಜನಸಂಖ್ಯೆಯ ಫಲವತ್ತತೆ ದರ 2.1 ಅಥವಾ ಅದಕ್ಕಿಂತ ಕಡಿಮೆ ಪ್ರಮಾಣಕ್ಕೆ ಇಳಿದಿದೆ. ಆದರೆ ನೈಜೀರಿಯಾದಲ್ಲಿ ಫಲವತ್ತತೆಯ ದರ 5.4 ರಷ್ಟಿದೆ ಎಂದು ತಿಳಿಸಿರುವ ವರದಿ, ಇದೇ ಕಾರಣಕ್ಕೆ ನೈಜೀರಿಯಾದಲ್ಲಿ ಜನಸಂಖ್ಯೆ ಹೆಚ್ಚಳವಾಗಲಿದೆ ಎಂದು ತಿಳಿಸಿದೆ.
ಭಾರತದ ಎಲ್ಲಾ ರಾಜ್ಯಗಳ ಫಲವತ್ತತೆಯ ದರ ಕುಸಿತಗೊಂಡಿದ್ದು, ಪ್ರತಿ ಮಹಿಳೆ ತನ್ನ ಜೀವಿತಾವಧಿಯಲ್ಲಿ 2 ಅಥವಾ ಅದಕ್ಕಿಂತ ಕಡಿಮೆ ಸಂಖ್ಯೆಯ ಮಕ್ಕಳಿಗೆ ಮಾತ್ರ ಜನ್ಮ ನೀಡಲಿದ್ದಾರೆ. ಆದರೂ ಭಾರತದ ಜನಸಂಖ್ಯೆ ಯಥಾವತ್ತಾಗಿ ಮುಂದುವರೆಯಲಿದೆ. ಭಾರತ, ಲ್ಯಾಟಿನ್ ಅಮೆರಿಕ, ಕೆರೇಬಿಯನ್ ದೇಶಗಳಲ್ಲಿ ಜನಸಂಖ್ಯೆ ಮುಂದುವರೆಯಲಿದ್ದು, 2027ರ ವೇಳೆಗೆ ದೇಶದಲ್ಲಿ ಯುವಕರ ಪ್ರಮಾಣ ಹೆಚ್ಚಳಗೊಳ್ಳಲಿದೆ.
ಈ ಕುರಿತು ಅಧ್ಯಯನ ನಡೆಸಿರುವ ಸಮಿತಿ ರಾಷ್ಟ್ರೀಯ ಜನಸಂಖ್ಯಾ ನೀತಿ 2000 ಮಾಹಿತಿಯನ್ವಯ ಫಲವತ್ತತೆಯ ದರ ವಿಶ್ವದಲ್ಲಿ 2.1 ರಷ್ಟಾಗಲಿದೆ. ಉತ್ತರ ಪ್ರದೇಶ ಹಾಗೂ ಬಿಹಾರಗಳಲ್ಲಿ ಫಲವತ್ತತೆಯ ದರ ಅತಿಹೆಚ್ಚಾಗಿದ್ದು, ಜನಸಂಖ್ಯೆಗೆ ಅನುಗುಣವಾಗಿ ಮೂಲಭೂತ ಸೌಲಭ್ಯಗಳೂ ಸಹ ಹೆಚ್ಚಾಗಬೇಕಿದೆ.
ಪ್ರಸ್ತುತ ಭಾರತದಲ್ಲಿ ಆರೋಗ್ಯಾಭಿವೃದ್ಧಿಗಾಗಿ ಬಜೆಟ್‍ನಲ್ಲಿ ನಿಗಧಿಪಡಿಸುತ್ತಿದ್ದ ಅನುದಾನವನ್ನು ಶೇ. 15 ರಷ್ಟು ಹೆಚ್ಚಳ ಮಾಡಲಾಗಿದೆ. ಇದು 2020ರ ವೇಳೆಗೆ ಪ್ರಸ್ತುತ ಇರುವ 56045 ಕೋಟಿಯಿಂದ 64.559 ಕೋಟಿಗೆ ಹೆಚ್ಚಳಗೊಳ್ಳಲಿದೆ. ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಅನುದಾನ ಶೇ. 8ಕ್ಕೆ ಹೆಚ್ಚಳಗೊಳ್ಳಲಿದೆ. ಕಳೆದ ಸಾಲಿನಲ್ಲಿ 32.995 ಕೋಟಿಯನ್ನು ಬಜೆಟ್ ಅನುದಾನ ನಿಗದಿಪಡಿಸಲಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
