ದೇಶದ 91 ಪ್ರಮುಖ ಜಲಾಶಯಗಳಲ್ಲಿ ಸಂಗ್ರಹಕ್ಕಿಂತ ಶೇ.48 ಕಡಿಮೆ ನೀರು…!!!

ನವದೆಹಲಿ

       ದೇಶದ 91 ಪ್ರಮುಖ ಜಲಾಶಯಗಳಲ್ಲಿ ಜ.17ಕ್ಕೆ ಕೊನೆಗೊಂಡ ವಾರದಲ್ಲಿ 77.171 ಶತಕೋಟಿ ಕ್ಯುಬಿಕ್‌ ಮೀಟರ್‌ನಷ್ಟು ನೀರು ಸಂಗ್ರಹ ಲಭ್ಯವಿದ್ದು, ಇದು ಈ ಜಲಾಶಯಗಳ ಒಟ್ಟು ಸಂಗ್ರಹಕ್ಕಿಂತ ಶೇ.48 ಕಡಿಮೆ ಎನಿಸಿದೆ.

       ಜ.10ಕ್ಕೆ ಕೊನೆಗೊಂಡ ವಾರದಲ್ಲಿ ಈ ಜಲಾಶಯಗಳಲ್ಲಿ ನೀರಿನ ಮಟ್ಟ ಶೇ.50ರಷ್ಟು ಕಡಿಮೆಯಿತ್ತು. 2018ರಲ್ಲಿ ಜ.17ಕ್ಕೆ ಕೊನೆಗೊಂಡ ವಾರದಲ್ಲಿ ನೀರು ಸಂಗ್ರಹ ಮಟ್ಟ ಶೇ.100ರಷ್ಟಿತ್ತು. 91 ಜಲಾಶಯಗಳ ಒಟ್ಟು ನೀರು ಸಂಗ್ರಹ ಸಾಮರ್ಥ್ಯ 161.993 ಶತಕೋಟಿ ಕ್ಯುಬಿಕ್‌ ಮೀಟರ್‌ನಷ್ಟಿದೆ. ಈ ಪೈಕಿ 37 ಜಲಾಶಯಗಳಿಂದ 60 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ.

       ಉತ್ತರ ವಲಯ ಹಿಮಾಚಲ ಪ್ರದೇಶ, ಪಂಜಾಬ್‌ ಮತ್ತು ರಾಜಸ್ತಾನ ರಾಜ್ಯಗಳನ್ನು ಒಳಗೊಂಡಿದ್ದು, 18.01 ಶತಕೋಟಿ ಕ್ಯುಬಿಕ್‌ ಮೀಟರ್ ಸಂಗ್ರಹದ ಆರು ಜಲಾಶಯಗಳ ಮೇಲುಸ್ತುವಾರಿಯನ್ನು ಕೇಂದ್ರೀಯ ಜಲ ಆಯೋಗ ನಡೆಸುತ್ತಿದೆ.
ಪೂರ್ವ ಪ್ರಾಂತ್ಯವು ಜಾರ್ಖಂಡ್‌, ಒಡಿಶಾ, ಪಶ್ಚಿಮ ಬಂಗಾಳ ಮತ್ತು ತ್ರಿಪುರಾ ರಾಜ್ಯಗಳನ್ನು ಒಳಗೊಂಡಿದ್ದು, ಇಲ್ಲಿ 18.83 ಶತಕೋಟಿ ಕ್ಯುಬಿಕ್‌ ಮೀಟರ್ ನೀರು ಸಂಗ್ರಹ ಸಾಮರ್ಥ್ಯದ 15 ಜಲಾಶಯಗಳಿವೆ.

      ಪಶ್ಚಿಮ ಪ್ರಾಂತ್ಯವು ಗುಜರಾತ್‌ ಮತ್ತು ಮಹಾರಾಷ್ಟ್ರ ರಾಜ್ಯಗಳನ್ನು ಒಳಗೊಂಡಿದ್ದು, ಇಲ್ಲಿ 31.26 ಶತಕೋಟಿ ಕ್ಯುಬಿಕ್‌ ಮೀಟರ್ ನೀರು ಸಂಗ್ರಹ ಸಾಮರ್ಥ್ಯದ 27 ಜಲಾಶಯಗಳಿವೆ. ಈ ಜಲಾಶಯಗಳಲ್ಲಿ ಸದ್ಯ 11.41 ಶತಕೋಟಿ ಕ್ಯುಬಿಕ್‌ ಮೀಟರ್ ನೀರು ಸಂಗ್ರಹವಿದ್ದು, ಇದು ಒಟ್ಟು ಸಾಮರ್ಥ್ಯದ ಶೇ.37ರಷ್ಟಾಗಿದೆ.

        ಕೇಂದ್ರೀಯ ಪ್ರಾಂತ್ಯವು ಉತ್ತರ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ ಮತ್ತು ಚತ್ತೀಸ್‌ಗಢ ರಾಜ್ಯಗಳನ್ನು ಒಳಗೊಂಡಿದ್ದು, ಇಲ್ಲಿ ಒಟ್ಟು 42.30 ಶತಕೋಟಿ ಕ್ಯುಬಿಕ್‌ ಮೀಟರ್ ನೀರು ಸಂಗ್ರಹ ಸಾಮರ್ಥ್ಯದ 12 ಜಲಾಶಯಗಳಿವೆ.

        ದಕ್ಷಿಣ ಪ್ರಾಂತ್ಯವು ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳನ್ನು ಒಳಗೊಂಡಿದ್ದು, ಈ ಪ್ರಾಂತ್ಯದಲ್ಲಿ ಒಟ್ಟು 51.59 ಶತಕೋಟಿ ಕ್ಯುಬಿಕ್‌ ಮೀಟರ್ ನೀರು ಸಂಗ್ರಹ ಸಾಮರ್ಥ್ಯದ 31 ಜಲಾಶಯಗಳಿವೆ. ಸದ್ಯ, ಈ ಜಲಾಶಯಗಳಲ್ಲಿ 21.01ಶತಕೋಟಿ ಕ್ಯುಬಿಕ್‌ ಮೀಟರ್ ನೀರು ಸಂಗ್ರಹವಿದ್ದು, ಇದು ಜಲಾಶಯಗಳ ಒಟ್ಟು ಸಾಮರ್ಥ್ಯದ ಶೇ.41ರಷ್ಟಾಗಿದೆ.

        ಹಿಂದಿನ ವರ್ಷಕ್ಕೆ ಹೋಲಿಸಿದರೆ ಉತ್ತಮ ನೀರು ಸಂಗ್ರಹವಿರುವ ರಾಜ್ಯಗಳಲ್ಲಿ ಹಿಮಾಚಲ ಪ್ರದೇಶ, ಪಂಜಾಬ್‌, ಉತ್ತರಾಖಂಡ, ಮಧ್ಯಪ್ರದೇಶ, ಚತ್ತೀಸ್‌ಗಢ, ಕರ್ನಾಟಕ ಮತ್ತು ತಮಿಳುನಾಡು ಸೇರಿವೆ. ರಾಜಸ್ಥಾನದ ಜಲಾಶಯಗಳಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಸರಿಪ್ರಮಾಣದ ನೀರಿನ ಸಂಗ್ರಹವಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap