ಅಮರಾವತಿ
ಇತ್ತೀಚೆಗೆ ಅತ್ಯಂತ ಚುರುಕಾಗಿ ಮತ್ತು ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತಾ ದೇಶದ ಕೇಂದ್ರಬಿಂದುವಾದ ವೈಎಸ್ ಜಗನ್ ಮೋಹನ್ ರೆಡ್ಡಿ ಹಿಂದೂಗಳ ಪುಣ್ಯಕ್ಷೇತ್ರ ತಿರುಪತಿ ಕ್ಷೇತದ ವಿಚಾರವಾಗಿ ಮತ್ತೊಂದು ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದಾರೆ.
ತಿರುಪತಿ ನಗರದಲ್ಲಿ ಮದ್ಯ ಮಾರಾಟದ ಮೇಲೆ ನಿಷೇಧ ಹೇರಲು, ಜಗನ್ ಸರಕಾರ ಮುಂದಾಗುವ ಸಾಧ್ಯತೆಯಿದೆ. ತಿರುಮಲ ಬೆಟ್ಟದಲ್ಲಿ ಈಗಾಗಲೇ ಮದ್ಯಮಾರಾಟಕ್ಕೆ ಬ್ರೇಕ್ ಹಾಕಲಾಗಿದೆ. ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಂ) ಆಡಳಿತ ಮಂಡಳಿ, ಬುಧವಾರ (ಅ 23) ಸಂಜೆ ಸಭೆ ಸೇರಿ, ಹಂತ ಹಂತದಲ್ಲಿ, ತಿರುಪತಿ ನಗರದಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರುವಂತೆ, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ನಿರ್ಧಾರಕ್ಕೆ ಬಂದಿದೆ.
ವೈ.ವಿ.ಸುಬ್ಬಾ ರೆಡ್ಡಿ ಅವರು ಮಾತನಾಡಿ ಮದ್ಯ ನಿಷೇಧದ ವಿಚಾರವಾಗಿ ಮಂಡಳಿಯ ನಿರ್ಧಾರದ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಿದ್ದೇವೆ ಮತ್ತು ನಾವು ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ತಿರುಮಲದಲ್ಲಿ ಈಗಾಗಲೇ ಮದ್ಯ ಮಾರಾಟಕ್ಕೆ ನಿಷೇಧವಿದೆ. ನಮ್ಮ ಪ್ರಸ್ತಾವನೆಯನ್ನು ಸರಕಾರ ಒಪ್ಪಿಕೊಳ್ಳುವ ವಿಶ್ವಾಸವಿದೆ ಎಂದು ಸುಬ್ಬಾ ರೆಡ್ಡಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
