ಜಲಿಯನ್‌ವಾಲಾ ಬಾಗ್ ಟ್ರಸ್ಟ್ ನಿಂದ ಕಾಂಗ್ರೆಸ್ ಔಟ್..!!

ನವದೆಹಲಿ

     ಜಲಿಯನ್‌ವಾಲಾ ಬಾಗ್ ರಾಷ್ಟ್ರೀಯ ಸ್ಮಾರಕ ತಿದ್ದುಪಡಿ ಮಸೂದೆಯನ್ನು ಶುಕ್ರವಾರ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು. ಕರಡು ಕಾನೂನು ಕಾಂಗ್ರೆಸ್ ಅಧ್ಯಕ್ಷರನ್ನು ಜಲಿಯನ್‌ವಾಲಾ ಬಾಗ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಟ್ರಸ್ಟಿಗಳ ಪಟ್ಟಿಯಿಂದ ತೆಗೆದುಹಾಕಲಿದೆ.

      ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷದ ಸದಸ್ಯರು ‘ಸಂಘ ಪರಿವಾರ ಶೈಲಿಯ ಇತಿಹಾಸ’ವನ್ನು ಉತ್ತೇಜಿಸಲು ಸರ್ಕಾರ ಪ್ರಯತ್ನಿಸುತ್ತಿದೆ.’ ಎಂದು ಆರೋಪಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಸೇರದ ಇತರ ನಾಯಕರ ತ್ಯಾಗವನ್ನು ಆ ಪಕ್ಷ ನಿರ್ಲಕ್ಷಿಸಿದೆ ಎಂದು ಬಿಜೆಪಿ ಸದಸ್ಯರು ಆಗಿಂದಾಗ್ಗೆ ಆರೋಪ ಮಾಡುವುದರೊಂದಿಗೆ ಆಡಳಿತ ಮತ್ತು ವಿರೋಧ ಪಕ್ಷಗಳ ಎರಡೂ ಕಡೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

      ದೇಶಪ್ರೇಮದ ಬಗ್ಗೆ ಉತ್ತಮ ಹೇಳಿಕೆಗಳನ್ನು ನೀಡುವ ಪ್ರತಿಪಕ್ಷದ ಕಾಂಗ್ರೆಸ್, ಸದನವು ಹುತಾತ್ಮರಿಗೆ ‘ಗೌರವ ಸಲ್ಲಿಸುವ ಮಹತ್ವದ ಮಸೂದೆಯನ್ನು ಚರ್ಚಿಸುತ್ತಿರುವಾಗ ಸಭಾತ್ಯಾಗ ಮಾಡಿರುವುದು ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಹೇಳಿದರು.

     ಬಿಜೆಪಿಯ ಸುಮೇಧಾನಂದ ಸರಸ್ವತಿ ಅವರು, ಕಾಂಗ್ರೆಸ್ ಅಸ್ತಿತ್ವಕ್ಕೆ ಬಂದಾಗಿನಿಂದ, ಮುಖ್ಯವಾಗಿ ಸ್ವಾತಂತ್ರ್ಯದ ನಂತರ, ಪಕ್ಷ 17 ಬಾರಿ ವಿಭಜನೆಯಾಗಿದೆ. ಆದ್ದರಿಂದ ಕಾಂಗ್ರೆಸ್ ಅಧ್ಯಕ್ಷರನ್ನು ಜಲಿಯನ್‌ವಾಲ ಬಾಗ್ ಟ್ರಸ್ಟ್‌ನ ಟ್ರಸ್ಟಿಯಾಗುವುದು ಸಮರ್ಥನೀಯವಲ್ಲ ಎಂದು ಹೇಳಿದರು.

      ತೃಣಮೂಲ ಕಾಂಗ್ರೆಸ್ ಸದಸ್ಯೆ ಸೌಗತಾ ರಾಯ್ ಮಾತನಾಡಿ ಇಂತಹ ಶಾಸನವನ್ನು ತರುವುದರೊಂದಿಗೆ ಸರ್ಕಾರ ‘ಸಂಘ ಪರಿವಾರ ಶೈಲಿಯ ಇತಿಹಾಸ’ ಉತ್ತೇಜಿಸಲು ಪ್ರಯತ್ನಿಸುತ್ತಿದೆ. ದೇಶ ಅದನ್ನು ಎಂದಿಗೂ ಸ್ವೀಕರಿಸುವುದಿಲ್ಲ ಎಂದು ಹೇಳಿದರು.‘ನಾನು ಈ ಮಸೂದೆಯನ್ನು ಸಂಪೂರ್ಣವಾಗಿ ವಿರೋಧಿಸುತ್ತೇನೆ. ಅದು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದೆ. ಅಲ್ಲದೆ, ರಾಷ್ಟ್ರೀಯ ಇತಿಹಾಸ ಮತ್ತು ರಾಷ್ಟ್ರೀಯ ನೀತಿಗೆ ಹಾಗೂ ಸ್ವಾತಂತ್ರ್ಯ ಹೋರಾಟದ ಇತಿಹಾಸಕ್ಕೆ ವಿರುದ್ಧವಾಗಿದೆ.’ ಎಂದು ರಾಯ್ ಹೇಳಿದರು.

       ಮಸೂದೆ ಪರ 214 ಸದಸ್ಯರು ಮತ ಚಲಾಯಿಸಿದರೆ, ವಿರುದ್ಧವಾಗಿ 30 ಸದಸ್ಯರು ಮತ ಚಲಾಯಿಸಿದರು.ಮಸೂದೆಯ ಬಗ್ಗೆ ತೀವ್ರವಾಗಿ ಪ್ರತಿಭಟಿಸಿದ ನಂತರ ತೃಣಮೂಲ ಕಾಂಗ್ರೆಸ್ ಮತ್ತು ಡಿಎಂಕೆ ಸದಸ್ಯರು ಮಸೂದೆ ಅಂಗೀಕಾರಗೊಳ್ಳುತ್ತಿರುವಾಗ ಸಭಾತ್ಯಾಗ ಮಾಡಿದರು.

        ಇಂದಿರಾ ಗಾಂಧಿ, ರಾಜೀವ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ದೇಶಕ್ಕೆ ಮಾಡಿರುವ ತ್ಯಾಗವನ್ನುಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಹೇಳಿದರು.ಆರ್‌ಎಸ್‌ಪಿ ಸದಸ್ಯ ಎನ್ ಕೆ ಪ್ರೇಮಚಂದ್ರನ್ ಮತ್ತಿತರ ಸದಸ್ಯರು ಇದನ್ನು ಬೆಂಬಲಿಸಿದರು. ಅಂತಹ ಕರಡು ಶಾಸನವನ್ನು ತರುವುದು ‘ರಚನಾತ್ಮಕ ಅಥವಾ ಸಕಾರಾತ್ಮಕ ರಾಜಕಾರಣವಲ್ಲ’ ಹಾಗೂ ಸಂಸತ್‌ ನ ವಿಸ್ತೃತ ಅಧಿವೇಶನದಲ್ಲಿ ಇದನ್ನು ಚರ್ಚಿಸುವುದು ಸಮರ್ಥನೀಯವಲ್ಲ.

      ಕಾಂಗ್ರೆಸ್ ಅಧ್ಯಕ್ಷರನ್ನು ತೆಗೆದುಹಾಕುವ ಮೂಲಕ ಸರ್ಕಾರ ಸಾಧಿಸುವುದಾದರೂ ಏನು ಎಂದು ಅವರು ಪ್ರಶ್ನಿಸಿದರು. ಚರ್ಚೆಗೆ ಉತ್ತರಿಸಿದ ಕೇಂದ್ರ ಸಚಿವರು, ಸರ್ಕಾರ ಇತಿಹಾಸವನ್ನು ಬದಲಾಯಿಸಲು ಪ್ರಯತ್ನಿಸುತ್ತಿಲ್ಲ. ಆದರೆ ಇತಿಹಾಸವನ್ನು ರೂಪಿಸಲು ಪ್ರಯತ್ನಿಸುತ್ತಿದೆ. ಮುಖ್ಯವಾಗಿ ತ್ಯಾಗ ಮಾಡಿದ ಎಲ್ಲ ನಾಯಕರಿಗೆ ಗೌರವ ನೀಡಲಾಗುತ್ತಿದೆ ಎಂದು ಹೇಳಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap