ಜನ ಸುರಕ್ಷಿತ, ಸುಭದ್ರ ಮತ್ತು ಅಂತರ್ಗತ ಭಾರತವನ್ನು ಬಯಸಿದ್ದಾರೆ: ಪ್ರಧಾನಿ ಮೋದಿ

ನವದೆಹಲಿ

    ತಮ್ಮ ಸರ್ಕಾರದ ‘ನವ ಭಾರತ’ ದೃಷ್ಟಿಕೋನವನ್ನು ಎತ್ತಿ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ, ಜನ ಸುರಕ್ಷಿತ, ಸುಭದ್ರ ಮತ್ತು ಅಂತರ್ಗತ ಭಾರತವನ್ನು ಬಯಸಿದ್ದಾರೆ. ಹೀಗಾಗಿಯೇ ಬಿಜೆಪಿಗೆ ಹಲವು ದಶಕಗಳ ನಂತರ ಪ್ರಬಲವಾದ ಜನಾದೇಶ ನೀಡಿದ್ದಾರೆ ಎಂದು ಲೋಕಸಭೆಯಲ್ಲಿಂದು ಹೇಳಿದ್ದಾರೆ.

    ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಿದ ಪ್ರಧಾನಿ, ಹಲವು ದಶಕಗಳ ನಂತರ, ಚುನಾವಣೆಯಲ್ಲಿ ಒಂದೇ ಪಕ್ಷಕ್ಕೆ ಇಂತಹ ಪ್ರಬಲವಾದ ಜನಾದೇಶ ಲಭಿಸಿದೆ. ಮತದಾರರು ಇಂದು ಎಚ್ಚರವಾಗಿದ್ದಾರೆ ಮತ್ತು ಅವರ ಅರಿವು ಪ್ರಶಂಸನೀಯವಾಗಿದೆ ಎಂದರು.

     ಕಳೆದ ಐದು ವರ್ಷಗಳಲ್ಲಿ ಯಾರನ್ನೂ ಹೊಂದಿಲ್ಲದ ಜನ, ಸರ್ಕಾರವನ್ನು ಬೆಂಬಲಿಸಿದ್ದಾರೆ ಎಂಬುದನ್ನು ನಾನು ಅರಿತುಕೊಂಡಿದ್ದೇನೆ. ಯಾರು ಗೆದ್ದರು ಮತ್ತು ಯಾರು ಸೋತರು ಎಂಬ ದೃಷ್ಟಿಯಿಂದ ಚುನಾವಣೆಗಳ ಬಗ್ಗೆ ನಾನು ಯೋಚಿಸುವುದಿಲ್ಲ ಎಂದು ಅವರು ಹೇಳಿದರು.

      2014 ರಲ್ಲಿ, ನಮ್ಮ ಸರ್ಕಾರವು ಒಂದು ಪ್ರಯೋಗವಾಗಿತ್ತು, ಆದರೆ ಜನ ನಮ್ಮನ್ನು ಅಳತೆ ಮಾಡಿ 2019ರಲ್ಲಿ ನಮಗೆ ಸಂಪೂರ್ಣವಾಗಿ ಜನಾದೇಶ ನೀಡಿದ್ದಾರೆ ಎಂದು ಮೋದಿ ಹೇಳಿದರು.ಇದು ದೇಶದ ಜನಕ್ಕಾಗಿ ನಮ್ಮ ಕಠಿಣ ಶ್ರಮ ಮತ್ತು ಸಮರ್ಪಣೆಯ ಫಲ ಎಂದ ಅವರು, ಯಶಸ್ವಿ ಅಧಿವೇಶನಕ್ಕಾಗಿ ಸ್ಪೀಕರ್‌ ಬಿರ್ಲಾ ಅವರಿಗೆ ಧನ್ಯವಾದ ಅರ್ಪಿಸಿದರು.

       ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ, ಬಿಜೆಡಿ ಮುಖಂಡ ಪಿನಾಕಿ ಮಿಶ್ರಾ, ಟಿಡಿಪಿಯ ಜಯದೇವ್ ಗಲ್ಲಾ, ಶಿವಸೇನೆಯ ವಿನಾಯಕ್ ರಾವ್, ಎಐಎಂಐಎಂನ ಅಸಾದುದ್ದೀನ್ ಓವೈಸಿ, ಬಿಜೆಪಿಯ ಪ್ರತಾಪ್ ಚಂದ್ರ ಸಾರಂಗಿ ಮತ್ತು ಹೀನಾ ಗವಿತ್ ಅವರು ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯಲ್ಲಿ ಭಾಗಿಯಾಗಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link